ಬೆಂಗಳೂರು : ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಕೋಕಾ ವಿಶೇಷ ನ್ಯಾಯಾಲಯ ಮುಂದೆ ಇಂದು ಇಬ್ಬರು ಸಾಕ್ಷಿದಾರರು ಹಾಜರಾಗಿ ಹೇಳಿಕೆ ನೀಡಿದ್ದಾರೆ. ಜುಲೈ 4 ರಿಂದ 8 ರವರೆಗೆ ವಿಶೇಷ ನ್ಯಾಯಾಲಯ ಪ್ರಕರಣ ವಿಚಾರಣೆ ನಡೆಸುತ್ತಿದೆ. ಎರಡು ದಿನಗಳ ಹಿಂದೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಹಾಜರಾಗಿ ಕೋರ್ಟ್ ಮುಂದೆ ಸಾಕ್ಷ್ಯ ನುಡಿದಿದ್ದರು.
ಇದರಂತೆ ಅಂದು ಸಂಜೆ ಬೈಕ್ ನಲ್ಲಿ ಅವರ ಮನೆಗೆ ಹೋಗಿದ್ದೆ, ಮನೆ ಬಳಿ ಹೋಗುತ್ತಿದ್ದಂತೆ ಗೌರಿ ಲಂಕೇಶ್ ಮನೆಯಿಂದ ಏನೋ ಶಬ್ದ ಬಂದಿದೆ ನೋಡಿ ಎಂದು ಸ್ಥಳೀಯರು ಹೇಳಿದ್ದರು. ಆಗ ಗೇಟ್ ಮುಂಭಾಗದಲ್ಲಿ ನಿಂತಿದ್ದ ಕಾರಿನ ಡೋರ್ ಓಪನ್ ಆಗಿದ್ದನ್ನು ಗಮನಿಸಿದ್ದೆ.
ಗೇಟ್ ಒಳ ಹೋಗುತ್ತಿದ್ದಂತೆ ಮನೆ ಮುಂಭಾಗದಲ್ಲಿ ಗೌರಿ ಬಿದ್ದಿದ್ದರು. ಹತ್ತಿರ ಹೋಗುತ್ತಿದ್ದಂತೆ ಆಕೆಯ ಎದೆಯ ಭಾಗ ರಕ್ತದಿಂದ ತುಂಬಿತ್ತು’ ಎಂದು ವಿಶೇಷ ಅಭಿಯೋಜಕ ಎಸ್.ಬಾಲನ್ ಮುಂದೆ ಹೇಳಿಕೆ ನೀಡಿದ್ದಾರೆ.
ಗೌರಿ ಲಂಕೇಶ್ ಮನೆ ಮುಂಭಾಗದ ಅಪಾರ್ಟ್ ಮೆಂಟ್ ಔಟ್ ಹೌಸ್ ನಲ್ಲಿ ಪತ್ನಿಯೊಂದಿಗೆ ವಾಸವಾಗಿರುವ ಮೇಸ್ತ್ರಿ ಮನೋಹರ್ ಎಂಬುವರು ನ್ಯಾಯಾಲಯದ ಮುಂದೆ ಸಾಕ್ಷಿ ನುಡಿದಿದ್ದಾರೆ. ‘ಅಂದು ರಾತ್ರಿ ಕೆಲಸ ಮುಗಿಸಿ ಮನೆಯಲ್ಲಿ ಊಟ ಮಾಡುವಾಗ ಗೌರಿ ಮನೆ ಕಡೆಯಿಂದ ಎರಡು ದಾಮ್ ದೂಮ್ ಎಂದು ಶಬ್ಧ ಬಂದಿತು. ಕೂಡಲೇ ಬಾಲ್ಕನಿಗೆ ತೆರಳಿ ನೋಡಿರುವುದಾಗಿ’ ಮನೋಹರ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.