Breaking News

ಬೆಳಗಾವಿಯಲ್ಲಿ ರುಂಡ ಇಲ್ಲದ ದೇಹ ತೇಲುತ್ತಿರುವುದು ಕಂಡು ಗ್ರಾಮಸ್ಥರು ದಿಗ್ಭ್ರಮೆ

Spread the love

ಬೆಳಗಾವಿ: ತಾಲೂಕಿನ ಮುತಗಾ ಗ್ರಾಮದ ಬಾವಿಯಲ್ಲಿ ರುಂಡ ಇಲ್ಲದ ದೇಹ ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದು, ಮಂಗಳವಾರ ದೇಹ ತೇಲುತ್ತಿರುವುದು ಕಂಡು ಗ್ರಾಮಸ್ಥರು ದಿಗ್ಭ್ರಮೆಯಾಗಿದ್ದಾರೆ.

ಸುಮಾರು 30 ವರ್ಷದ ಯುವಕನನ್ನು ಶಿರಚ್ಛೇದ ಮಾಡಿ ಕೊಲೆಗೈದು ರುಂಡ ಬೇರ್ಪಡಿಸಿ ದೇಹವನ್ನು ದುಷ್ಕರ್ಮಿಗಳು ಬಾವಿಯಲ್ಲಿ ಎಸೆದು ಹೋಗಿದ್ದಾರೆ.

ಬೆಳಗ್ಗೆ ಹೊಲಕ್ಕೆ ಹೋದ ಗ್ರಾಮಸ್ಥರು ಇದನ್ನು ಕಂಡು ಆತಂಕಗೊಂಡಿದ್ದಾರೆ.

 

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುನೀಲ ಅಷ್ಟೇಕರ ಎಂಬವರ ಹೊಲದ ಬಾವಿಯಲ್ಲಿ ರುಂಡ ಇಲ್ಲದ ದೇಹ ಪತ್ತೆಯಾಗಿದೆ. ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲಿಸಿದರು. ಸುತ್ತಲೂ ಎಲ್ಲಾದರೂ ರುಂಡ ಎಸೆಯಲಾಗಿದೆಯೇ ಎಂಬುದರ ಬಗ್ಗೆ ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆ.

ಮಾರೀಹಾಳ ಇನ್ಸಪೆಕ್ಟರ್ ಮಹಾಂತೇಶ ಬಸ್ಸಾಪುರೆ ಸೇರಿದಂತೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಮನೆಗಳ ಕರ ಸುಲಾತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಗವಾಡ ತಾಲೂಕ ಪ್ರಥಮ ಸ್ಥಾನ.

Spread the loveಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 15 ತಾಲೂಕಿನ ತಾಲೂಕಾ ಪಂಚಾಯಿತಿಗಳ ಪೈಕಿ ಕಾಗವಾಡ ತಾಲೂಕ ಪಂಚಾಯಿತಿ ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ