ಗದಗ: ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದು ಡಿ.ಕೆ. ಶಿವಕುಮಾರ್ ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾರೆ. ಆದರೆ, ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಯಾರೂ ವಿರೋಧ ಮಾಡಿಲ್ಲ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಮೀಡಿಯಾ ಮುಂದೆ ಬಂದು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಇದೆಲ್ಲ ಕಟ್ಟುಕಥೆ ಎಂದು ಗದಗದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ನಾನು 25 ವರ್ಷದಿಂದ ಪರಿಚಯ ಇದ್ದೇನೆ. ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಅಂತ ಅವತ್ತಿನಿಂದಲೂ ಅದನ್ನೇ ಹೇಳ್ತಿದ್ದಾರೆ. ವ್ಯಕ್ತಿ ಪೂಜೆ ಬಿಡಿ, ಪಕ್ಷ ಪೂಜೆ ಮಾಡಿ ಅಂತ ಹಿಂದಿನಿಂದಲೂ ಹೇಳಿದ್ದಾರೆ. ಆದರೆ, ಆ ಮಾತಿಗೂ ಸಿದ್ದರಾಮಯ್ಯ ಹುಟ್ಟು ಹಬ್ಬಕ್ಕೆ ಯಾವುದೇ ಕನೆಕ್ಷನ್ ಇಲ್ಲ ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ವಿರುದ್ಧ ಅವರು ಹರಿಹಾಯ್ದರು. ಬಿಜೆಪಿ ಅವರಿಗೆ ಮಾಡಕ್ಕೆ ಕೆಲಸ ಇಲ್ಲ, ಜನರಿಗೆ ಏನು ಮಾತು ಕೊಟ್ಟಿದ್ರೋ ಅದನ್ನ ಏನೂ ಮಾಡಲಿಲ್ಲ. ಈಗ ಉಳಿದಿದ್ದು ಬರೀ ಫೇಕ್ ನ್ಯೂಸ್ ಸ್ಪ್ರೆಡ್ಮ್ ಮಾಡೋದು ಬಿಟ್ರೆ, ಬೇರೆ ಏನೂ ಇಲ್ಲ. ಸೋಷಿಯಲ್ ಮೀಡಿಯಾ ಮುಖಾಂತರ ವಾಸ್ತವ ಹಾಳು ಮಾಡ್ತಿದ್ದಾರೆ. ಬಿಜೆಪಿ ಅವರಿಗೆ ನಮ್ಮ ಪಕ್ಷದ ಆಂತರಿಕ ವಿಚಾರಗಳು ಏನು ಗೊತ್ತು?. ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಎಲ್ಲಿ ಬೇಕಾದರೂ ನಿಲ್ತಾರೆ. ಅವರು 224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದ್ರೂ ನಿಲ್ಲಬಹುದಾದ ನಾಯಕರು ಎಂದರು.
Laxmi News 24×7