Breaking News

ರಬಕವಿ-ಬನಹಟ್ಟಿ:ಕಾಣೆಯಾದ ವಕೀಲ ಶವವಾಗಿ ಪತ್ತೆ

Spread the love

ರಬಕವಿ-ಬನಹಟ್ಟಿ : ಕಳೆದೊಂದು ವಾರದಿಂದ ಕಾಣೆಯಾಗಿದ್ದ ಬನಹಟ್ಟಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ರಾಜಕುಮಾರ ಗೂಗಾಡ(46) ಶವವಾಗಿ ಪತ್ತೆಯಾಗಿದ್ದಾರೆ. ತಾಲೂಕಿನ ಚಿಮ್ಮಡ ಗ್ರಾಮದ ಗೂಗಾಡ ಕುಟುಂಬದ ಭೂಮಿಯಲ್ಲಿನ ಕಬ್ಬಿನ ಬೆಳೆಯಲ್ಲಿ ಶವ ಪತ್ತೆಯಾಗಿದೆ.

ಜೂನ್ 24 ರಂದು ಬಹಿರ್ದೆಸೆಗೆಂದು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದರು. ಎಲ್ಲೋ ಹೋಗಿರಬೇಕೆಂದು ಸಂಬಂಧಿಕರು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಕೊಳೆತ ಸ್ಥಿತಿಯಲ್ಲಿ ಶನಿವಾರ ಮನೆಯ ಹಿಂಭಾಗದ ಕಬ್ಬಿನ ಬೆಳೆಯಲ್ಲಿ ಕೆಟ್ಟ ವಾಸನೆ ಬರಲಾರಂಭಿಸುತ್ತಿದ್ದಂತೆ ಶೋಧ ನಡೆಸಿದ ಕುಟುಂಬಸ್ಥರಿಗೆ ಮೃತ ರಾಜಕುಮಾರನ ಶವ ಪತ್ತೆಯಾಗಿದ್ದು, ಸಾವಿಗೀಡಾದ ಪ್ರದೇಶದಲ್ಲಿ ವಿಷದ ಬಾಟಲಿ ಕಂಡು ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ಪೊಲೀಸರದ್ದಾಗಿದೆ.

ಕಳೆದೆರಡು ವರ್ಷಗಳಿಂದ ಮಾನಸಿಕವಾಗಿ ಬಳಲುತ್ತ, ವಿಷ ಸೇವಿಸಿ ಸಾಯುವುದಾಗಿ ಕುಟುಂಬಸ್ಥರ ಮುಂದೆ ಪದೇ ಪದೇ ತಿಳಿಸುತ್ತಿದ್ದನೆಂದು ಮೂಲಗಳಿಂದ ತಿಳಿದು ಬಂದಿವೆ. ಸದ್ಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love

About Laxminews 24x7

Check Also

ಬಜೆಟ್​ನಲ್ಲಿ ಇಲಾಖಾವಾರು ಹಣ ಹಂಚಿಕೆ: ಯಾವ ಕ್ಷೇತ್ರಕ್ಕೆ ಎಷ್ಟು ಪಾಲು?

Spread the loveಬೆಂಗಳೂರು, ಮಾ.6: ಇಂದು (ಮಾ.6) ಮಂಡನೆಯಾದ 2026-27ನೇ ಸಾಲಿನ ರಾಜ್ಯ ಬಜೆಟ್‌ನ ಒಟ್ಟು ಗಾತ್ರ ಸರಿಸುಮಾರು 4.48 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ