ಬೆಳಗಾವಿ: ಮನೆಯಲ್ಲಿ ಮಲಗಿಕೊಂಡಿರುವ ರೀತಿಯಲ್ಲಿ ಸಾವನ್ನಪ್ಪಿದ ಮನುಷ್ಯನ ಅಸ್ತಿಪಂಜರ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಶಿವಾಪೂರ ಗ್ರಾಮದ ಮನೆಯೊಂದರಲ್ಲಿ ನಡೆದಿದೆ. ಮೃತರನ್ನು ಶಿವಾಪೂರ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಮತ್ತು ಅಂದಾಜು 8 ರಿಂದ 9 ತಿಂಗಳ ಹಿಂದೆ ಸಾವಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬುದ್ಧಿಮಾಂದ್ಯನಾಗಿದ್ದ ಆತ ಮನೆಯಲ್ಲಿ ತಾನೊಬ್ಬನೇ ವಾಸ ಮಾಡುತ್ತಿದ್ದ. ಹಳೇ ಕಟ್ಟಡದಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದ ಆತ ಪದವೀಧರನಾಗಿದ್ದ. ಮನೆಯ ಒಳಗೆ ಕೀಲಿ ಹಾಕಿಕೊಂಡು ಇರುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸದ್ಯ ಸ್ಥಳಕ್ಕೆ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಮೌನೇಶ್ವರ ಮಾಲಿ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾಗಿದೆಯೋ? ಕಾಯಿಲೆಯಿಂದ ಸಾವನ್ನಪ್ಪಿದ್ದಾರೋ? ಅಥವಾ ಹಸಿವಿನಿಂದ ಮೃತಪಟ್ಟಿದ್ದಾರೋ ಎಂಬುವುದನ್ನು ಪೊಲೀಸರು ತನಿಖೆಯಿಂದ ಪತ್ತೆ ಹಚ್ಚಬೇಕಿದೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7