ಹು-ಧಾ ಮಹಾನಗರ ಪಾಲಿಕೆಯ ಆರಂಭದಲ್ಲಿಯೇ ಸದಸ್ಯರ ನಡುವೆ ಗಲಾಟೆ ನಡೆದಿದೆ. ಮೇಯರ್ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾಯಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಸಭಾಭವನದಲ್ಲಿ ಮೇಯರ್ ಭಾಷಣ ಮುಕ್ತಾಯಗೊಂಡಿದ್ದು, ಸರ್ವ ಸದಸ್ಯರು ಮೇಯರ್ ಭಾಷಣದ ಬಗ್ಗೆ ಅಭಿಪ್ರಾಯ ವ್ಯಕ್ಯಪಡಿಸಬೇಕಿತ್ತು. ಈ ಸಂದರ್ಭದಲ್ಲಿ ಧ್ವನಿ ಎತ್ತಿದ ಸುವರ್ಣ ಕಲಕುಂಟ್ಲ ಅವರು, ಭಾಷಣ ಬೇಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಧ್ವನಿ ಎತ್ತೊಣ್ಣ ಎಂದು ಸಮಸ್ಯೆ ಪ್ರಸ್ತುತ ಪಡಿಸಲು ಮುಂದಾದ ಸಂದರ್ಭದಲ್ಲಿ ಸದಸ್ಯರ ನಡುವೆ ಜಟಾಪಟಿ ನಡೆದಿದೆ.