ಬೆಳಗಾವಿಯ ಪಾಟೀಲ್ ಮಾಳಾದಲ್ಲಿ ಸರಕಾರದಿಂದ ಮಾರಾಟ ಮಾಡಲು ಬ್ಯಾನ್ ಆದ ಗಿಳಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಯುವಕನನ್ನು ಸ್ಥಳೀಯ ಅಕ್ವೇರಿಯಂ ಅಂಗಡಿ ಮಾಲೀಕರು ರೆಡ್ ಹ್ಯಾಂಡ್‍ಆಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ನಗರದ ಪಾಟೀಲ್ ಮಾಳಾದಲ್ಲಿ ಮಾರಾಟ ಮಾಡಲು ಬ್ಯಾನ್ ಆದ ಗಿಳಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಯುವಕನನ್ನು ಸ್ಥಳೀಯ ಅಕ್ವೇರಿಯಂ ಅಂಗಡಿ ಮಾಲೀಕರು ರೆಡ್ ಹ್ಯಾಂಡ್‍ಆಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಈತನನ್ನು ತಾಂಗಡಿ ಗಲ್ಲಿಯ ನಿವಾಸಿ ಆಕಾಶ್ ಗುರವ್ ಎಂದು ಗುರುತಿಸಲಾಗಿದೆ.
ಇನ್ನು ಈತನ ಜೊತೆಗಿದ್ದ ಇನ್ನೋರ್ವ ಯುವಕ ಪ್ರಥಮೇಶ್ ಉರ್ಫ್ ಗೋಟು ಎಂಬವ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇನ್ನು ಆಕಾಶ್‍ನನ್ನು ಹಿಡಿದು ವಿಚಾರಿಸಿದ ಸ್ಥಳೀಯರು ಆತನನ್ನು ಒಂದೆಡೆ ಕೂಡಿಹಾಕಿದ್ದರು. ಈ ವೇಳೆ ಆಕಾಶ್ ಗಿಳಿಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರುತ್ತಿದ್ದ. ನಂತರ ತಾನೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಈ ಕುರಿತಂತೆ ಸ್ಥಳೀಯ ಲೈಸೆನ್ಸ್ ಹೊಂದಿರುವ ಹಕ್ಕಿ ಮಾರಾಟ ಅಂಗಡಿಕಾರರ ಮೇಲೆ ಚಾಡಿ ಹೇಳುತ್ತಿದ್ದ ಎಂಬ ಮಾಹಿತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
Laxmi News 24×7