Breaking News

ಬೆಳಗಾವಿ ಜನಪ್ರಿಯ ಶಾಸಕ ಅನಿಲ್ ಬೆನಕೆ ಫೌಂಡೇಶನ್ ವತಿಯಿಂದ ಉತ್ತರ ಕ್ಷೇತ್ರ ಗಳಲ್ಲಿ ಫ್ರಿ ಹೆಲ್ತ್ ಕ್ಯಾಂಪ್

Spread the love

ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

ಬೆಳಗಾವಿ: ಕೆ ಎಲ್ ಇ ಸಂಶೋಧನಾ ಕೇಂದ್ರ, ಜೆ ಎನ್ ಮೇಡಿಕಲ್ ಕಾಲೇಜು ಹಾಗೂ ಅನಿಲ ಬೆನಕೆ ಫೌಂಡೇಶನ್ ಹಾಗೂ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಲಾಗಿತ್ತು.

ಶನಿವಾರ ರುಕ್ಮಿಣಿ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ನಗರ ಸೇವಕರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಒಟ್ಟು 14 ಸ್ಥಳಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜನೆ ಏರ್ಪಡಿಸಲಾಗಿದೆ. ಈಗ ಸದ್ಯ ರುಕ್ಮಿಣಿ ನಗದಲ್ಲಿ ಶಬಿರ ಆಯೋಜನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಚವ್ಹಾಟ್ ಗಲ್ಲಿ, ಗಾಂಧಿ ನಗರ, ಶಿವಾಜಿ ನಗರ, ಫುಲ್ ಬಾಗ ಗಲ್ಲಿ, ಬಾಂದುರ ಗಲ್ಲಿ, ರಾಮತಿರ್ಥ ನಗರ, ಹನುಮಾನ ನಗರ, ವೈಭವ ನಗರ, ಸದಾಶಿವ ನಗರ ಹೀಗೆ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗುತ್ತದೆ. ಶಿಬಿರದಲ್ಲಿ ಉಚಿದ ಔಷಧೀ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.

ಈ ಶಿಬಿರದಲ್ಲಿ ತಜ್ಞ ವೈದ್ಯರು ವೈದ್ಯಕೀಯ ಶಸ್ತ್ರಚಿಕಿತ್ಸೆ, ಎಲುಬು, ಕೀಲು ಮತ್ತು ಮರುಜೋಡಣೆ, ಸ್ತ್ರೀರೋಗ, ಚಿಕ್ಕಮಕ್ಕಳ, ನೇತ್ರ ಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು, ಚರ್ಮರೋಗ, ಶ್ವಾಸಕೋಶ, ಹೃದಯ ರೋಗ, ಸರರೋಗ ಶಸ್ತ್ರಚಿಕಿತ್ಸೆ, ಮೂತ್ರಕೋಶ ಶಸ್ತ್ರಚಿಕಿತ್ಸೆ, ಕ್ಯಾನ್ಸರ್‌ ಶಸ್ತ್ರ ಚಿಕಿತ್ಸೆಗೆ ಉಚಿತ ತಪಾಸಣೆ ಮತ್ತು ಸಲಹೆಯನ್ನು ನೀಡಿದರು.

ಈ ವೇಳೆ ನಗರ ಸದಸ್ಯರಾರ ಅಫಜಲ್ ಖಾನ ಪಠಾಣ, ರಾಜು ಡೋಣಿ, ಶ್ರೇಯಸ್ಸ ನಾಕಾಡಿ, ಲಕ್ಷ್ಮೀ ನಾಯಕ, ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ರುಕ್ಮಿಣಿ ನಗರ ಸರಕಾರಿ ಶಾಲೆಯ ಪ್ರಾಚಾರ್ಯ ಆರ್.ಎಚ್.ಅಳವಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the loveಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ