Breaking News

K.L.E..ಕೃಷಿ ವಿಜ್ಞಾನ ಕೇಂದ್ರದಲ್ಲಿ ವಸತಿ ಗೃಹ ನಿರ್ಮಾಣ

Spread the love

ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಅನುಕೂಲ ಕಲ್ಪಿಸುವದಕ್ಕೋಸ್ಕರ ಕೆಎಲಇ ಸಂಸ್ಥೆಯು ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದ್ದು, ಈ ಭಾಗದ ಕೃಷಿ ಹಾಗೂ ಸಮಾಜದ ಅಭಿವೃದ್ದಿಯಲ್ಲಿ ಸಂಸ್ಥೆಯ ಯೋಗದಾನ ಬಹಳಷ್ಟಿದೆ

. ಡಾ. ಪ್ರಭಾಕರ ಕೋರೆ ಅವರ ಪ್ರಯತ್ನದ ಫಲವಾಗಿ ಇಂದು ದೇಶದಲ್ಲಿಯೇ ಅತ್ಯುತ್ತಮವಾದ ಕೃಷಿ ವಿಜ್ಞಾನ ಕೇಂದ್ರ ಗ್ರಾಮೀಣ ಪ್ರದೇಶದಲ್ಲಿ ತಲೆ ಎತ್ತಿ ನಿಂತಿದೆ ಎಂದು ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಶ್ಲಾಘಿಸಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿರುವ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ರೈತರ ಹಾಗೂ ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣಕ್ಕೆ ಅಡಿಗಲ್ಲು ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಭನೆ ಸಾಧಿಸಬೇಕೆಂಬುದಕ್ಕೆ ಡಾ. ಪ್ರಭಾಕರ ಕೋರೆ ಕೃಷಿ ಕ್ಷೇತ್ರದ ಅಭಿವೃದ್ದಿ ಹಾಗೂ ಖಾದ್ಯತೈಲ ಕೃಷಿ ಬೆಳವಣಿಗೆಗೆ ಅಗತ್ಯವಾದ ಸಹಕಾರ ನೀಡುತ್ತಿದ್ದಾರೆ.

ಅದರಂತೆ ಈ ಭಾಗದಲ್ಲಿ ಶೇಂಗಾ, ಸೋಯಾ ಹಾಗೂ ಇನ್ನೀತರ ಎಣ್ಣೆ ಕಾಳುಗಳನ್ನು ಬೆಳೆಯಲು ಬೀಜ ಪೂರೈಕೆಯಿಂದ ಹಿಡಿದು, ತಾಂತ್ರಿಕ ನೆರವು ನೀಡುತ್ತಿದ್ದಾರೆ. ಕೆವಿಕೆಯಲ್ಲಿ ರೈತರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಪರಿಸರ, ಮಣ್ಣಿನ ಗುಣಮಟ್ಟ, ಮಳೆ ಪ್ರಮಾಣದ ಮೇಲೆ ಬೀಜ, ತಂತ್ರಜ್ಞಾನದ ಸಂಶೋಧನೆ ಆಗುತ್ತಿದೆ. ಕಲ್ಲಿನಿಂದ ತುಂಬಿದ್ದ ಈ ಜಾಗವನ್ನು ಸುಂದರ ತೋಟ ಮಾಡಿದ ಶ್ರೇಯಸ್ಸು ಡಾ.ಪ್ರಭಾಕರ ಕೋರೆಯವರಿಗೆ ಸಲ್ಲುತ್ತದೆ ಎಂದು ಹೇಳಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ