ಗೌಂಡವಾಡದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಂಡವಾಡ ಮಹಿಳೆಯರನ್ನು ಪೊಲೀಸ್ ವಾಹನದಲ್ಲಿ ಕರೆ ತಂದ ಪೊಲೀಸರ ನಡೆ ಸಧ್ಯ ತೀವ್ರ ಟೀಕೆಗೆ ಗ್ರಾಸವಾಗಿದೆ.
ಹೌದು ಮನೆಯಲ್ಲಿ ಮಲಗಿದ್ದ ಮಕ್ಕಳನ್ನ ಅಪರಾಧಿಗಳಂತೆ ಪೊಲೀಸರು ಕರೆದೊಯ್ದಿದ್ದಾರೆ. ಪೆÇಲೀಸರ ವರ್ತನೆಗೆ ಬಂಧಿತ ಮಕ್ಕಳ ತಾಯಿಂದಿರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಬಿಡುಗಡೆ ಮಾಡುವಂತೆ ತಾಯಂದಿರು ಧರಣಿ ನಡೆಸಿದರು. ಇದೇ ವೇಳೆ ಪೊಲೀಸರ ಎದುರೇ ತಾಯಂದಿರು ಕಣ್ಣೀರಾಕಿದ್ದಾರೆ.ಇನ್ನು ಮಕ್ಕಳು ಎಲ್ಲಿದ್ದಾರೆಂತು ತಿಳಿಯದೇ ಸತೀಶ್ ಶವ ಇಟ್ಟಿರುವ ಕೆಎಲ್‍ಇ ಆಸ್ಪತ್ರೆಗೆ ಮಹಿಳೆಯರು ಧಾವಿಸಿದ್ದರು. ಇನ್ನು ಮಹಿಳೆಯರನ್ನು ಪೆÇಲೀಸ್ ವಾಹನದಲ್ಲಿ ಮಹಿಳಾ ಪೊಲೀಸರು ಕರೆತಂದು ಬಿಟ್ಟಿದ್ದಾರೆ
Laxmi News 24×7