ಬದಾಮಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ .ಕೆ.ಡಿ ಕರಮಳ್ಳಿ , ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ಎಸಿಬಿ ಅಧಿಕಾರಿಗಳ ದಾಳಿ ಬಲೆಗೆ ಬಿದ್ದಿದ್ದಾರೆ.
2018-19 ನೇ ಸಾಲಿನಲ್ಲಿ ಬಾದಾಮಿ ತಾಲೂಕಿನ ಕಾತರಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಕೊಳ್ಳಲಾದ ಕಾಮಗಾರಿಗಳಿಗೆ ಸರಬರಾಜು ಮಾಡಿದ ಕಚ್ಚಾವಸ್ತುಗಳು ಸಂಭಂಧಿಸಿದ ವೋಚರ್ ಮತ್ತು ಅಳತೆ ಪುಸ್ತಕಗಳನ್ನು ನೀಡಲು ಗುತ್ತಿಗೆದಾರರಿಗೆ 60 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.
ಮೊದಲ ಹಂತವಾಗಿ 30 ಸಾವಿರ ರೂ. ಲಂಚ ಪಡೆದಿದ್ದರು. ಎರಡನೇ ಬಾರಿ ಮತ್ತೆ 30 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಡಿಎಸ್ ಪಿ ಜಿ.ವಾಯ್.ಗುಡಾಜಿ ನೇತೃತ್ವದ ತಂಡ ದಾಳಿ ನಡೆಸಿದೆ. ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಬಸವರಾಜ್ ಸಂಗಪ್ಪ ಪಾತ್ರೋಟಿ ಎಂಬುವವರು ಪ್ರಥಮ ದರ್ಜೆಯ ಗುತ್ತಿದಾರರು ದೂರು ನೀಡಿದ್ದರು.
ಇಂಜಿನಿಯರಿಂಗ್ .ಕೆ.ಡಿ ಕರಮಳ್ಳಿ ಸೇರಿ ಇಬ್ಬರು ಸಿಬ್ಬಂದಿಗಳ ವಿರುದ್ದ ದೂರು ದಾಖಲಾಗಿದೆ.
Laxmi News 24×7