ಮೊನ್ನೆ ನಡೆದ ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹೊಳೆಯನ್ನು ಹರಿಸಿ ಚುನಾವಣೆಯಲ್ಲಿ ವಿಜಯವನ್ನು ಸಾಧಿಸಿದೆ. ಇದು ನಿಜವಾದ ಫಲಿತಾಂಶವಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೊಳ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪ್ರವಾಸೀ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ್ ಕಾಂಗ್ರೆಸ್ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಹಣದ ಹೊಳೆಯನ್ನು ಹರಿಸಿ ಗೆಲುವನ್ನು ಸಾಧಿಸಿದೆ. ಈ ವೇಳೆ ಹಣದ ಹೊಳೆಯನ್ನು ಹೇಗೆ ಹರಿಸಿತು ಎಂಬುದನ್ನು ಕುರಿತಂತೆ ನಾವು ಚರ್ಚೆ ಮಾಡುವುದಿಲ್ಲ. ಈ ಕುರಿತಂತೆ ಎಲ್ಲಾ ಮಾಧ್ಯಮದವರು ಬರೆದಿದ್ದೀರಿ. ನಾನು ಮತ್ತೆ ಈ ಕುರಿತಂತೆ ವಿಶ್ಲೇಶಣೆ ಮಾಡುವುದಿಲ್ಲ. ಕೆಲವೊಮ್ಮೆ ರಾಜಕೀಯದಲ್ಲಿ ರಾಜಕೀಯ ವಿಶ್ಲೇಷಣೆಗಳ ಲೆಕ್ಕಾಚಾರ ತಪ್ಪಾಗುತ್ತದೆ ಎಂದರು.
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಸೋಲಿಗೆ ಬಿಜೆಪಿ ನಾಯಕರ ವ್ಯಂಗ್ಯ ಹೇಳಿಕೆಗಳೇ ಕಾರಣವಾಯ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ವ್ಯಂಗ್ಯ ಹೇಳಿಕೆಗಳು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಟೀಕೆ ಟಿಪ್ಪಣಿಗಳು ಆಯಾ ಸಂದರ್ಭದಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇದನ್ನು ಮುಂದುವರೆಸುವುದು ಇರುವುದಿಲ್ಲ ಎಂದರು