Breaking News

ಬಾವಿಗೆ ಬೀಳುತ್ತಿದ್ದ ಸಾರಿಗೆ ಬಸ್ ಜಸ್ಟ್ ಮಿಸ್

Spread the love

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಇನ್ನೇನು ಆಳ ಬಾವಿಗೆ ಬೀಳಬೇಕು ಅನ್ನುಷ್ಟರಲ್ಲಿ ಆಪದ್ಬಾಂಧವನಾಗಿ ಬಂದ ಬೇವಿನ ಮರ, 70 ಜನರ ಪ್ರಾಣ ಉಳಿಸಿದೆ.

ಇಂಡಿಯಿಂದ ವಿಜಯಪುರಕ್ಕೆ ಗುರುವಾರ ಇಂಡಿ ಡಿಪೋದ ಸಾರಿಗೆ ಬಸ್ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು.

ನಾಗಠಾಣ ಮತ್ತು ಅಲಿಯಾಬಾದ್ ನಡುವಿನ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಬದಿಯ ತಗ್ಗು ಪದೇಶಕ್ಕೆ ನುಗ್ಗಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಮರದ ಮುಂದೆಯೇ ಆಳ ಬಾವಿ ಇದೆ. ಬೇವಿನ ಮರ ಅಡ್ಡ ಇರದೇ ಹೋಗಿದ್ದರೆ ಬಸ್ ನೇರವಾಗಿ ಬಾವಿಗೆ ಬೀಳುತ್ತಿತ್ತು.

ಬಸ್​ನಲ್ಲಿದ್ದ ಮೂರ್ನಾಲ್ಕು ಮಂದಿ ಗಾಯಗೊಂಡಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೇವಿನ ಮರ ಇರದೇ ಹೋಗಿದ್ದರೆ ನಮ್ಮ ಕಥೆ ಏನಾಗುತ್ತಿತ್ತೋ… ದೇವರಂತೆ ನಮ್ಮನ್ನು ಕಾಪಾಡಿತು ಬೇವಿನ ಮರ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.


Spread the love

About Laxminews 24x7

Check Also

ನಾಯಿ ಕಚ್ಚಿ ಆರು ತಿಂಗಳ ಬಳಿಕ ವ್ಯಕ್ತಿ ಸಾವು

Spread the love ಬೈಲಹೊಂಗಲ : ನಾಯಿ ಕಚ್ಚಿ ಆರು ತಿಂಗಳ ಬಳಿಕ ವ್ಯಕ್ತಿ ಸಾವು ನಾಯಿ ಕಡಿದು ಆರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ