Breaking News

ಬೆಳಗಾವಿಯ ಕಣಬರ್ಗಿಯಲ್ಲಿರುವ ಮಹೇಶ ಫೌಂಢೇಶನ್‍ನಲ್ಲಿ ವಿದ್ಯಾರ್ಥಿನಿಯರ ವಿನೂತನ ಮೂರು ಅಂತಸ್ತಿನ ಪ್ರತ್ಯೇಕ ವಿದ್ಯಾರ್ಥಿನಿಲಯದ ಉದ್ಘಾಟನಾ ಸಮಾರಂಭ

Spread the love

ಕುಂದಾನಗರಿ ಬೆಳಗಾವಿಯ ಕಣಬರ್ಗಿಯಲ್ಲಿರುವ ಮಹೇಶ ಫೌಂಢೇಶನ್‍ನಲ್ಲಿ ವಿದ್ಯಾರ್ಥಿನಿಯರ ವಿನೂತನ ಮೂರು ಅಂತಸ್ತಿನ ಪ್ರತ್ಯೇಕ ವಿದ್ಯಾರ್ಥಿನಿಲಯದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಹೌದು, ಇಂದು ರವಿವಾರ ಬೆಳಗಾವಿಯ ಕಣಬರಗಿಯಲ್ಲಿ ಮೆಡಿಕಲ್ಲಿ ಚಾಂಲೇಂಜ್ಡ್ ಹಾಗೂ ಎಚ್‍ಐವಿ ಪೀಡಿತ ಮಕ್ಕಳ ಶಿಕ್ಷಣ, ಸಮತೋಲನ ಆಹಾರ ಹಾಗೂ ಉತ್ತಮ ಆರೋಗ್ಯ ಸೌಲಭ್ಯವನ್ನು ನೀಡುತ್ತಿರುವ ರಾಜ್ಯದ ಹೆಮ್ಮೆಯ ಸಾಮಾಜಿಕ ಸೇವಾ ಸಂಸ್ಥೆ ಮಹೇಶ ಫೌಂಢೇಶನ್ ನಲ್ಲಿ ವಿದ್ಯಾರ್ಥಿನಿಯರ ವಸತಿನಿಲಯದ ಮೂರು ಮಹಡಿಯ ಪ್ರತ್ಯೇಕ ವಿದ್ಯಾರ್ಥಿನಿಲಯದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ವಿಜಯ ಪುಸಳಕರ್ ಸ್ಕೂಲ್ ಆ್ಯಂಡ್ ಲನಿರ್ಂಗ್ ಸೆಂಟರ್‍ನ ಮೂರು ಅಂತಸ್ತಿನ ವಿದ್ಯಾರ್ಥಿನಿಯರ ವಸತಿನಿಲಯವನ್ನು ಇಂಡೋ ಶಾಟ್ಲೇ ಆಟೋ ಪಾಟ್ರ್ಸ್‍ನ ಅಧ್ಯಕ್ಷರು ಹಾಗೂ ಖ್ಯಾತ ಉದ್ಯಮಿ ವಿಜಯ ಪುಸಳಕರ್‍ರವರ ರವರ ಪುತ್ರ ರೋಹನ್ ಪುಸಳಕರ್ ಉದ್ಘಾಟಿಸಿದರು.

ಈ ವೇಳೆ ಮಹೇಶ ಫೌಂಡೇಶನ್ ಅಧ್ಯಕ್ಷರಾದ ಮಹೇಶ್ ವಸಂತ ಜಾಧವ್ ಶ್ರೀ ರೋಹನ್ ಪುಸಳಕರ್, ಶ್ರೀಮತಿ ಮೇಘಾ ಪುಸಳಕರ್, ಹಾಗೂ ಶ್ರೀ ರಾಮಚಂದ್ರರಾವ್ ಮೊದಲಾದ ಗಣ್ಯರಿಗೆ ಕಟ್ಟಡ ನೂತನ ವಿನ್ಯಾಸ ಕುರಿತಂತೆ ಮಾಹಿತಿ ನೀಡಿದರು. ಈ ವೇಳೆ ಗಣ್ಯರು ಫೌಂಡೇಶನ್ ನ ವಸತಿ ನಿಲಯಗಳು, ಕಂಪ್ಯೂಟರ್ ಕೊಠಡಿ, ಲಿವಿಂಗ್ ರೂಮ್ ಸೇರಿದಂತೆ ಮಕ್ಕಳಿಗೆ ಒದಗಿಸಲಾಗಿರುವ ವಿವಿಧ ಸೌಲಭ್ಯಗಳನ್ನು ಕುರಿತು ಮಹೇಶ ಜಾಧವರವರು ಗಣ್ಯರಿಗೆ ಮಾಹಿತಿ ನೀಡಿದರು.

ಈ ವೇಳೆ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಭರತನಾಟ್ಯ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಲಾಯಿತು. ಈ ವೇಳೆ ವೇದಿಕೆ ಮೇಲಿದ್ದ ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಕಾರ್ಯಕ್ರಮ ಕುರಿತಂತೆ ಪ್ರಾಸ್ತಾವಿಕವಾಗಿ ಮಾತನಾಡಿದ ಮಹೇಶ ಜಾಧವ್‍ರವರು, ನಾನು ಈ ರೀತಿಯ ಸೇವಾ ಸಂಸ್ಥೆಯನ್ನು ಮಾಡಬೇಕೆಂದು ಯೋಚಿಸುತ್ತಿದ್ದ ವೇಳೆ ನಾನು ಹಾಗೂ ನನ್ನ ಸ್ನೇಹಿತ ಈ ಕುರಿತು ಮಾತನಾಡಿದ್ದೆವು. ನಾನು ಸಂಸ್ಥೆಯನ್ನು ಪ್ರಾರಂಭಿಸಬೇಕೆಂದಾಗ 2008ರಲ್ಲಿ ಎಲ್ಲರೂ ನಮ್ಮನ್ನು ಬೇರೆ ದೃಷ್ಟಿಯಿಂದ ನೋಡಲಾರಂಭಿಸಿದರು. 2016ರಲ್ಲಿ ನನಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಾಗ ನನಗೆ ಎಲ್ಲೆಡೆಗೂ ನನಗೆ ಸನ್ಮಾನ ಮಾಡಲು ಪ್ರಾರಂಭಿಸಿದರು. ಒಂದು ಚಿಕ್ಕ ಕಟ್ಟಡದಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ರಾಷ್ಟ್ರ ಮಟ್ಟಕ್ಕೆ ಬೆಳೆಯಲು ಸಾಕಷ್ಟು ದಾನಿಗಳು ಸಹಾಯ ಮಾಡಿದ್ದಾರೆ ಎಂದು ಫೌಂಡೇಶನ್‍ನ ಬೆಳವಣಿಗೆಗೆÉ ಕಾರಣೀಕರ್ತರಾದ ಗಣ್ಯರ ಕುರಿತಂತೆ ಮಾತನಾಡಿದರು.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ