ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಓರ್ವ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ದೇಸೂರ ರೈಲು ನಿಲ್ದಾಣದ ಬಳಿ ನಡೆದಿದೆ.
ದೇಸೂರ ರೈಲು ನಿಲ್ದಾಣ ಹಾಗೂ ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜ್ ರೈಲ್ವೇ ಗೇಟ್ ಹತ್ತಿರ ಈ ಘಟನೆ ಸಂಭವಿಸಿದೆ. ಅಂದಾಜು 25 ವಯಸ್ಸಿನ ಯುವಕನಾಗಿದ್ದು. 5.7 ಅಡಿ ಎತ್ತರ, ಸಾದ ಗೆಂಪು ಬಣ್ಣ, ಮೈಯಿಂದ ತೆಳ್ಳಗೆ, ಉದ್ದು ಮುಖ, ನೀಟಾದ ಮೂಗು, ತಲೆಯಲ್ಲಿ 2 ಇಂಚ ಕಪ್ಪು ಕೂದಲು ಹೊಂದಿದ್ದಾನೆ. ತಿಳಿ ಹಸಿರು ಆದಿದಾಸ್ ಟೀ ಶರ್ಟ, ಕಪ್ಪು ಪ್ಯಾಂಟ್, ಕೈಯಲ್ಲಿ ಕಡಗ ಧರಿಸಿರುತ್ತಾನೆ. ಆಮೆ ಗುರುತಿನ ಉಂಗುರ ಧರಿಸಿರುತ್ತಾನೆ. ಈ ಸಂಬಂಧ ಬೆಳಗಾವಿಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.