ಬೆಳಗಾವಿ – ಬೆಳಗಾವಿ -ಬಾಗಲಕೋಟ್ ರಸ್ತೆ, ಸಿಂಧೊಳ್ಳಿ ಕ್ರಾಸ್ ಕುಬೇರ ವೈನ್ಸ್ ಮತ್ತು ಅಯ್ಯಂಗಾರ ಬೇಕರಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದವರ ಮೇಲೆ ಎಸಿಪಿ ಮಾಹಾಂತೇಶ್ವರ ಜಿದ್ದಿ ಮಾರ್ಗದರ್ಶನದಲ್ಲಿ ದಾಳಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ.
ಸಿದ್ದಪ್ಪಾ ಬಸವಂತ ಕುರುಬರ (೩೫) (ಸಾ|| ನಡಕಿನ ಓಣಿ ಹಣ್ಣಿಕೇರಿ ತಾ: ಬೈಲಹೊಂಗಲ ಜಿ: ಬೆಳಗಾವಿ), ಸೋಮನಾಥ ಶಿವಪ್ಪಾ ಮಾದನಶೆಟ್ಟಿ (೩೪) (ಸಾ|| ನಡಕಿನ ಓಣಿ ಹಣ್ಣಿಕೇರಿ ತಾ: ಬೈಲಹೊಂಗಲ ಜಿ: ಬೆಳಗಾವಿ), ಸಾಗರ ಸದಾಶಿವ ನಾಯಿಕ (೨೧) (ಸಾ|| ಲಕ್ಷ್ಮಿ ಗಲ್ಲಿ ಸಾಂಬ್ರಾ ಬೆಳಗಾವಿ), ವಿನಾಯಕ ಬಸಪ್ಪ ಸೋಮನ್ನವರ (೨೦) (ಸಾ|| ಪಂತ ನಗರ ಪಂತ ಬಾಳೆಕುಂದ್ರಿ ಬೆಳಗಾವಿ) ಬಂಧಿತರು.
ಬಂಧಿತರಿಂದ ಸುಮಾರು ೧೧,೦೫೦/- ರೂಪಾಯಿ ಮೌಲ್ಯದ ೧ ಕಿಲೋ ೧೫೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು, ಬೆಳಗಾವಿ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗಾಂಜಾ ಮಾರಾಟಗಾರರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ ಬೆಳಗಾವಿ ನಗರ ಸಿಸಿಐಬಿ ಘಟಕದ ಪಿಐ ಸಂಜೀವ ಎಂ ಕಾಂಬಳೆ ಹಾಗೂ ಸಿಬ್ಬಂದಿಗಳಾದ. ಬಿ ಆರ್ ಮುತ್ನಾಳ, ಬಿ ಎನ್ ಬಳಗನ್ನವರ, ಎಸ್ ಸಿ ಕೊರೆ, ಎಸ್ ಎಸ್ ಪಾಟೀಲ, ಸಿ ಜೆ ಚಿನ್ನಪ್ಪಗೋಳ, ಎಮ್ ಎಮ್ ವಡೇಯರ, ಎ ಕೆ ಕಾಂಬಳೆ, ಅಶೋಕ ಭೋಸಲೆ ರವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.