ದೇಶದಲ್ಲಿ ರಾಷ್ಟ್ರಪತಿ ಚುನಾವಣೆ ಘೋಷಣೆ ಆಗ್ತಿದ್ದಂತೆ ಆಡಳಿತ ರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳು ಅಭ್ಯರ್ಥಿಯ ಹುಡುಕಾಟದಲ್ಲಿ ನಿರತವಾಗಿವೆ. ಅದರಲ್ಲೂ ಕಾಂಗ್ರೆಸ್ ಇನ್ನಿತರ ಪ್ರತಿಪಕ್ಷಗಳ ಜೊತೆಗೆ ಸೇರಿ ಬಿಜೆಪಿಗೆ ತಕ್ಕ ಪ್ರತಿಸ್ಪರ್ಧಿಯನ್ನ ಕಣಕ್ಕಿಳಿಸೋಕೆ ತಯಾರಿ ನಡೆಸ್ತಿದೆ.
ಇನ್ನು ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನ ಕಣಕ್ಕಿಳಿಸಬಹುದು ಅನ್ನೋ ವರದಿಗಳು ಬಲವಾಗಿ ಕೇಳಿ ಬರ್ತಿವೆ. ಮತ್ತೊಂದು ಕಡೆ ಕಾಂಗ್ರೇಸ್ಸೇತರರನ್ನ ರಾಷ್ಟ್ರಪತಿಯನ್ನಾಗಿಸೋಕೆ ಚಿಂತನೆ ನಡೆಸಲಾಗ್ತಿದೆ ಅಂತ ಕೂಡ ಹೇಳಲಾಗ್ತಿದೆ. ಆದ್ರೆ ಅಧಿಕೃತವಾಗಿ ಯಾವುದೇ ಪಕ್ಷ ಕೂಡ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ CPM, NCP, TMC ಮುಖ್ಯಸ್ಥರ ಜೊತೆಗೆ ಮಾತಾನಾಡಿದ್ದಾರೆ ಅಂತ ವರದಿಯಾಗಿದೆ.