ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಪ್ರವೇಶ ಮಾಡಿದ್ದು ಉತ್ತಮ ಮಳೆಯಾಗಿದೆ. ಇದರಿಂದ ರೈತರು ಸಂತಸದಿಂದ ಭೂಮಿತಾಯಿಯ ಉಡಿ ತುಂಬುವ ಕಾರ್ಯಕ್ರಮ ಅಂದ್ರೆ ಬಿತ್ತನೆ ಕಾರ್ಯವನ್ನು ಪ್ರಾರಂಭವಾಗಿವೆ.
ಹೌದು ಬೆಳಗಾವಿ ಜಿಲ್ಲೆಯ ವಿವಿಧೆಡೆ ಹಾಗೂ ಬೆಳಗಾವಿಯ ಸುತ್ತಮುತ್ತಲಿನ ತಾಲೂಕುಗಳಲ್ಲಿ ಕೂಡ ಉತ್ತಮವಾಗಿ ಮಳೆಯಾಗಿದೆ. ಇನ್ನು ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶ ಮಾಡಿದ್ದು ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ.
ಬೆಳ್ಳಾನ ಎರೆಡೆತ್ತು ಬೆಳ್ಳಿಯ ಬಾರಕೋಲ ಎನ್ನುವಂತೆ ಬಸವಣ್ಣನನ್ನು ತೆಗೆದುಕೊಂಡು ಹೊಲಗದ್ದೆಗಳಲ್ಲಿ ಬಿತ್ತನೆ ಕಾರ್ಯ ಈಗ ಭರದಿಂದ ಸಾಗಿದೆ. ಬೆಳಗಾವಿಯ ಸುತ್ತಮುತ್ತಲ ಪ್ರದೇಶಗಳ ರೈತರಿಗೆ ಸಂಭ್ರಮವೋ ಸಂಭ್ರಮ.
ಈ ಬಾರಿ ಉತ್ತಮ ಮಳೆಯಾಗಿ ಮತ್ತೆ ಉತ್ತಮ ಫಸಲು ಬರಲಿ ಎಂದು ಭೂಮಿ ತಾಯಿಗೆ ಪೂಜೆಯನ್ನು ಮಾಡಿ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ಬೆಳಗಾವಿಯ ಗಲಗಾ, ಸಾಮ್ರಾ ಭಾಗ, ಬಸ್ತವಾಡ, ಯಳ್ಳೂರ, ಮಚ್ಛೆ, ಕಡೋಲಿ, ಉಜಗಾಂವವ ಸುತ್ತಮುತ್ತಿನ ಏರಿಯಾದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು ಇಂದು ಸುರಿದ ಮಳೆ ಮತ್ತೆ ರೈತರಿಗೆ ಉತ್ಸಾಹ ತಂದಿದೆ.