Breaking News

ಅತ್ತ ಶಿಕ್ಷಕನೂ ಅಲ್ಲ…ಪದವೀಧರನೂ ಅಲ್ಲ…ಉದ್ಯೋಗವಂತೂ ಬರೋದೆ ಇಲ್ಲ: ಪ್ರಕಾಶ ಹುಕ್ಕೇರಿ ವಿರುದ್ಧ ವ್ಯಂಗ್ಯವಾಡಿದ ಉಮೇಶ್ ಕತ್ತಿ

Spread the love

ವಾಯುವ್ಯ ಪದವಿಧರ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ತ ಶಿಕ್ಷಕರು ಅಲ್ಲ ಇತ್ತ ಪದವೀಧರರನು ಅಲ್ಲದ ವ್ಯಕ್ತಿಯನ್ನು ಚುನಾವಣೆಯ ಕಣಕ್ಕೆ ಇಳಿಸಿದೇ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚಿಕ್ಕೋಡಿಯಲ್ಲಿ ವಾಯುವ್ಯ ಪದವಿಧರ ಶಿಕ್ಷಕರ ಮತಕ್ಷೇತ್ರ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಉಮೇಶ ಕತ್ತಿ ಅವರು ಪ್ರಕಾಶ್ ಹುಕ್ಕೇರಿ ಮೊದಲು ಪಂಚಾಯತಿ ಸದಸ್ಯರಾಗಿ, ರಾಜ್ಯದ ವಿಧಾನ ಪರಿಷತ್, ವಿಧಾನಸಭೆ, ಲೋಕಸಭೆ ಸದಸ್ಯರಾಗಿ ಮಂತ್ರಿಯಾಗಿ ಕೆಲಸಮಾಡಿದ್ದಾರೆ. ಇವತ್ತು ಅವರನ್ನ ವಾಯುವ್ಯ ಶಿಕ್ಷಕ ಮತಕ್ಷೇತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿAದ ಕಣಕ್ಕಿಳಿಸಿದ್ದಾರೆ. ಇದನ್ನ ಯಾಕೆ ಹೇಳುವುದೆಂದರೆ ಉದ್ಯೋಗ ಕಳೆದುಕೊಂಡ ಬಳಿಕ ಉದ್ಯೋಗ ಹುಡುಕಾಡುವ ಕೆಲಸ ಮಾಡ್ತಿದ್ದಾರೆಂದು ಟಾಂಗ್ ಕೊಟ್ಟರು. ಒಂದು ಕಡೆ ಶಿಕ್ಷಕನು ಅಲ್ಲ ಪದವಿಧರನು ಅಲ್ಲ, ಉದ್ಯೋಗನು ಬರಲ್ಲ, ಅವರಿಗೆ ಬರುವುದು ರಾಜಕಾರಣ ಒಂದೆ ಉದ್ಯೋಗ. ನಮ್ಮದು ಕೂಡ ಅವರ ತರಹನೇ ರಾಜಕಾರಣ ಆದರೆ, ನಾವು ಸ್ವಲ್ಪ ಬೇರೆ ಉದ್ಯೋಗ ಮಾಡುತ್ತೇವೆ.

ಈ ಪರಿಸ್ಥಿತಿಯಲ್ಲಿರುವಂತಹ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ೭೭ ವರ್ಷ. ಬಿಜೆಪಿಯಲ್ಲಿ ೭೫ ವರ್ಷವಾದರೆ ಮನೆಗೆ ಕಳುಹಿಸುತ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ ೯೦ ಆದ್ರು ಚುನಾವಣೆಗೆ ನಿಲ್ಲಿಸ್ತಾರೆ ಎಂದು ವ್ಯಂಗ್ಯವಾಡಿದ್ರು.
.ಇನ್ನು ಅರುಣ್ ಶಹಾಪುರ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿದಿದ್ದಾರೆ. ಅವರು ಶಿಕ್ಷಕರಿದ್ದಾರೆ ಶಿಕ್ಷಕರ ಬಗ್ಗೆ ಅವರಿಗೆ ಕಾಳಜಿ ಇದೆ. ಪದವಿಧರ ಕ್ಷೇತ್ರಕ್ಕೆ ಹಣಮಂತ ನಿರಾಣಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಕೂಡ ಪದವಿಧರರಿದ್ದಾರೆ.ಕಾಂಗ್ರೆಸ್ ನಿಂದ ಅಭ್ಯರ್ಥಿ ಸಿಗದ ಪ್ರಸಂಗದಲ್ಲಿ ಅದನ್ಯಾವನೊ ಒಬ್ಬನನ್ನ ನಿಲ್ಲಿಸಿದ್ದಾರೆ ಅವನ ಹೆಸರು ಗೊತ್ತಿಲ್ಲ.

ಮೊದಲು ಅವನ ಅಣ್ಣ, ಅಜ್ಜ ಅಪ್ಪ ತಮ್ಮ ಕಾಂಗ್ರೆಸ್ ನಲ್ಲಿ ಇದ್ದರಂತೆ ಹಾಗಾಗಿ ಅವನನ್ನ ಹುಡುಕಾಡಿ ತಂದು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪದವಿಧರ ಅಭ್ಯರ್ಥಿ ಸುನೀಲ್ ಸಂಖ ಯಾರು ಗೊತ್ತಿಲ್ಲ ಎಂದ್ರು. ಕಾಂಗ್ರೆಸ್ ಅಭ್ಯರ್ಥಿಗಳನ್ನ ಮನೆಗೆ ಕಳುಹಿಸುವ ಕೆಲಸ ಮಾಡಿ ಎಂದು ಸಚಿವ ಉಮೇಶ್ ಕತ್ತಿ ಕರೆ ನೀಡಿದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ