Breaking News

ಮಹಿಳೆಯರು ಆರ್ಥಿಕ ಸದೃಢತೆ ಹೊಂದಿದರೆ ಸ್ವಾವಲಂಬನೆಗೆ ದಾರಿಯಾಗುತ್ತದೆ.: ಪ್ರಿಯಂಕಾ ಜಾರಕಿಹೊಳಿ

Spread the love

ಮಹಿಳೆಯರು ಆರ್ಥಿಕ ಸದೃಢತೆ ಹೊಂದಿದರೆ ಸ್ವಾವಲಂಬನೆಗೆ ದಾರಿಯಾಗುತ್ತದೆ. ಅದಕ್ಕೆ ಮೂಲ ಮಾರ್ಗ ನಾನಾ ತರಬೇತಿಗಳನ್ನು ಪಡೆದು ಆ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ ಕರೆ ನೀಡಿದರು.

ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭೈರವನಾಥ ಸ್ವ-ಸಹಾಯ ಸಂಘ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಉದ್ಯೋಗ, ಸಹಕಾರ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ಔದ್ಯೋಗಿಕರಣ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರಸ್ತುತ ಮಹಿಳೆಯರು ಮುಂದುವರೆದಿದ್ದು ಸಂತಸದ ವಿಚಾರ ಎಂದರು. ಒಂದು ಕುಟುಂಬ ಪ್ರಗತಿ ಹೊಂದಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಆದ್ದರಿಂದ ಮಹಿಳೆಯರು ಹಣಕಾಸು ಪರಿಸ್ಥಿತಿ ಸುಧಾರಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.ಸ್ವ-ಸಹಾಯ ಸಂಘಗಳಿAದ ಸಾಕಷ್ಟು ಮಹಿಳೆಯರು ಎಲ್ಲಾ ದೃಷ್ಟಿಯಿಂದ ಪ್ರಗತಿ ಕಾಣುತ್ತಿದ್ದು, ಮಹಾನ್ ಸಾಧಕಿಯರಾದ ಸುಧಾ ಮೂರ್ತಿ ಅವರಂತ ಸರಳತೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಬೇಕೆಂದು ಸೂಚಿಸಿದರು.


Spread the love

About Laxminews 24x7

Check Also

ಹಸಿದ ಹೊಟ್ಟೆಗೆ ಆಸರೆ: ಮುನವಳ್ಳಿಯಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ!

Spread the love​”ಬಡವರ ಮತ್ತು ಶ್ರಮಿಕ ವರ್ಗದ ಜನರ ಹಸಿವು ನೀಗಿಸುವ ಉದ್ದೇಶದಿಂದ, ಇಂದು ಮುನವಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ