Breaking News

ಆಲ್ರೀ ಶಾಸಕರೇ ಮಾಸ್ಟರ್ ಪ್ಲಾನ್ ವೇಳೆ ಸಾಯಿ ಮಂದಿರ ತೆರವು ಮಾಡಲಾಗಿದೆ ಎಂದು ಸಬೂಬು ಕೊಡ್ತೀರಲ್ಲಾ ನಾಚಿಕೆ ಆಗಲ್ವಾ ನಿಮಗೆ?

Spread the love

ಆಲ್ರೀ ಶಾಸಕರೇ ಮಾಸ್ಟರ್ ಪ್ಲಾನ್ ವೇಳೆ ಸಾಯಿ ಮಂದಿರ ತೆರವು ಮಾಡಲಾಗಿದೆ ಎಂದು ಸಬೂಬು ಕೊಡ್ತೀರಲ್ಲಾ ನಾಚಿಕೆ ಆಗಲ್ವಾ ನಿಮಗೆ? ನೀವು ಹೇಳೋದು ಹೌದಾದ್ರೆ ನನ್ನ ಈ ಪ್ರಶ್ನೆಗಳಿಗೆ ಉತ್ತರ ಕೊಡಿ..

1) ರಸ್ತೆ ಆದಮೇಲೆ ಮಂದಿರ ಒಡೆಸಿದ್ರೋ ಅಥವಾ ಮಂದಿರ ಒಡೆದ ಮೇಲೆ ರಸ್ತೆ ಆಯಿತೋ?

2) ದೇಶ ಬಿಡಿ, ನಿಮ್ಮ ಕ್ಷೇತ್ರದಲ್ಲೇ ಮಾಸ್ಟರ್ ಪ್ಲಾನ್ ಮಾಡಿದ ಯಾವ ರಸ್ತೆಯ ಮೇಲೂ ದೇವಾಲಯಗಳು ಇಲ್ವಾ?

3) ಮಾಸ್ಟರ್ ಪ್ಲಾನ್ ಇರುವುದು ನಿಮ್ಮ ಅಕ್ರಮ ಜಮೀನಿಗೆ ಹೊಂದಿಕೊಂಡ ರಸ್ತೆಗೆ ಮಾತ್ರವಾ? ನಂತರ ಬರುವ ಪೊಲೀಸ್ ಸ್ಟೇಷನ್ ಮುಂದುವರಿದು ನಾತ್ ಪೈ ಸರ್ಕಲ್ ವರೆಗೆ ಇಲ್ವಾ?

4) ಇಲ್ಲಿ ನಿಮ್ಮ ಜಮೀನಿನ ಎದುರು ಅಡ್ಡಿಯಾಗುವ ದೇವಸ್ಥಾನ ಕೆಡವಿ ಆತಂಕ ನಿವಾರಿಸಿಕೊಂಡಿರಿ. ಅಲ್ಲಿ ನಿಮ್ಮ ವೋಟ್ ಬ್ಯಾಂಕ್ ರಕ್ಷಣೆಗೆ ಮಾಸ್ಟರ್ ಪ್ಲಾನ್ ಸ್ಥಗಿತಗೊಳಿಸಿದಿರಿ ಅಲ್ವಾ?

 

5) ನಾಲ್ಕು ನೂರು ವರ್ಷಗಳ ಹಿಂದೆ ಮಸೀದಿಯಲ್ಲಿ ಇತ್ತು ಎಂದು ನೀವು ಹೇಳುತ್ತಿರುವ ದೇವಸ್ಥಾನ ನಿರ್ಮಿಸಲು ಹೊರಟಿರುವ ನಿಮಗೆ, ಕೇವಲ 11 ವರ್ಷದ ಹಿಂದೆ ನೀವೇ ಕೆಡವಿ ಹಾಕಿಸಿರುವ ಸಾಯಿಬಾಬಾ ಮಂದಿರ ಮರು ನಿರ್ಮಾಣಕ್ಕೆ ಏನು ತೊಂದರೆ ಅನ್ನೋದನ್ನ ಸಾರ್ವಜನಿಕವಾಗಿ ಹೇಳ್ತೀರಾ?

6) ದೇವಾಲಯಕ್ಕೆ ಮಾಸ್ಟರ್ ಪ್ಲಾನ್ ಅಡ್ಡಿಯಾಯ್ತು ಸರಿ. ಅಲ್ಲಿನ ನಿಲ್ದಾಣವನ್ನು ಎರಡು ಬಾರಿ ಕೆಡವಿದಿರಲ್ಲಾ ಅದಕ್ಕೆ ಏನು ಅಡ್ಡಿ. ಮಾಸ್ಟರ್ ಪ್ಲಾನ್ ಒಳಗೆ ಬಸ್ ನಿಲ್ದಾಣ ಬರೋದಿಲ್ವಾ?

7) ಕೊನೆಯದಾಗಿ, ಜೈನ ಧರ್ಮದವರಾಗಿ ಹಿಂದೂ ದೇವಾಲಯಗಳ ಮೇಲೆ ಇಷ್ಟೊಂದು ಪ್ರೀತಿ ಇಟ್ಟುಕೊಂಡಿರುವ ನೀವು ಹಿಂದೂ ಧರ್ಮಕ್ಕೆ ಮತಾಂತರ ಯಾಕೆ ಆಗಬಾರದು?

– ಸರಳಾ ಸಾತ್ಪುತೆ ✍️


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ