ಮುಂಬೈ: ಕನ್ನಡಿಗ ಮಯಾಂಕ್ ಅಗರ್‌ವಾಲ್ ನೇತೃತ್ವದ ಕಿಂಗ್ಸ್ ಪಂಜಾಬ್ ತಂಡವು ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಆದರೆ ತಮ್ಮ ಬ್ಯಾಟಿಂಗ್ ವೈಖರಿಯಿಂದ ಅತ್ಯುತ್ತಮ ಪ್ರದರ್ಶನ ನೀಡಿದ ಶಿಖರ್‌ಧವನ್ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಈ ಬೆನ್ನಲ್ಲೇ ಮನೆಗೆ ಹಿಂದಿರುಗುತ್ತಿದ್ದಂತೆ ಶಿಖರ್‌ಧವನ್ ಅವರ ತಂದೆ ಮನಬಂದಂತೆ ಥಳಿಸಿದ್ದಾರೆ. ಮನೆಗೆ ಬರುತ್ತಿದ್ದಂತೆ ಜಾಡಿಸಿ ಒದ್ದು, ಕೆಳಗೆ ಬೀಳಿಸಿದ್ದಾರೆ. ಕುಟುಂಬದವರು ತಡೆಯಲು ಬಂದರೂ ಸುಮ್ಮನಾಗದೇ ಧವನ್‌ಗೆ ಮನಬಂದಂತೆ ಥಳಿಸಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿಖರ್ ಧವನ್ ಅಭಿಮಾನಿಗಳು ಶಾಖ್ ಆಗಿದ್ದಾರೆ.
ಶಿಖರ್ ಧವನ್‌ಗೆ ತನ್ನ ತಂದೆ ಥಳಿಸುತ್ತಿರುವುದನ್ನು ಕಂಡು ಕುಟುಂಬದಲ್ಲಿ ಕೋಲಾಹಲ ಎದ್ದಿತೇ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಅಚ್ಚರಿ ಪಡಬೇಕಾದ್ದಿಲ್ಲ. ಏಕೆಂದರೆ ಇದೊಂದು ಫನ್ನಿ ವೀಡಿಯೋ ಆಗಿದೆ.
Laxmi News 24×7