Breaking News

ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

Spread the love

ಕೋಲಾರ: ಬಡವರ ಹಸಿವು ನೀಗಿಸಲು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ.

ಮಾರಾಟವಾದ ಅಕ್ಕಿಯು ಅಕ್ರಮವಾಗಿ 15ಕ್ಕೂ ಹೆಚ್ಚು ರೈಸ್ ಮಿಲ್‍ಗಳನ್ನು ಸೇರುತ್ತಿವೆ. ಹಲವು ಬಾರಿ ದಾಳಿ ನಡೆದರೂ ದಂಧೆ ಮಾತ್ರ ನಿಂತಿಲ್ಲ. ಈ ಹಿಂದೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ 2017ರಲ್ಲಿ ಟನ್‍ಗಟ್ಟಲೆ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದರು.

ಕಳೆದ ವರ್ಷ ಪಿಆರ್‍ಎಸ್ ಆಗ್ರೋಟೆಕ್ ರೈಸ್ ಮಿಲ್ ಮೇಲೆ ದಾಳಿ ಮಾಡಿ, ಸುಮಾರು 8,497 ಕ್ವಿಂಟಾಲ್‍ನಷ್ಟು ಅಂದರೆ 1 ಕೋಟಿ 7 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿಯನ್ನು ಹರಾಜು ಮಾಡಿದ್ದರು. ಕೋರ್ಟ್ ಆದೇಶದಂತೆ ಕೆಲ ರೈಸ್‍ಮಿಲ್‍ಗಳಿಗೆ ಬೀಗ ಹಾಕಲಾಗಿದೆ. ಆದರೂ ಕೆಲ ಮಿಲ್ ಮಾಲೀಕರು ಭಯಪಡದೇ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ