ಮಂಡ್ಯ: ಕೊಲೆ ಪ್ರಕರಣ ಸಂಬಂಧ ಮೂರು ಆರೋಪಿಗಳನ್ನು ಬಂಧಿಸಿದಂತ ಪೊಲೀಸರಿಗೆ, ಕೊಲೆ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದನ್ನು ಕೇಳಿ ಶಾಕ್ ಆಗಿದ್ದಾರೆ. ಅಲ್ಲದೇ ಕೊಲೆಯಾದಂತ ವ್ಯಕ್ತಿಯ ಹಿಮ್ಮಡಿಯನ್ನೇ ಕತ್ತಿರಿಸಿರೋ ಕಾರಣ ಕೇಳಿ ಬೆಚ್ಚಿಬಿದ್ದಿದ್ದಾರೆ.
ಅಷ್ಟಕ್ಕೂ ರಾಜ್ಯದಲ್ಲೊಂದು ಹೀಗೆ ಬೆಚ್ಚಿಬೀಳಿಸೋ ಘಟನೆ ನಡೆದಿದ್ದು ಎಲ್ಲಿ ಎನ್ನುವ ಬಗ್ಗೆ ಮುಂದೆ ಓದಿ..
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್ ಕೊಲೆ ಪ್ರಕರಣದ ಬೆನ್ನತ್ತಿದಂತ ಪೊಲೀಸರಿಗೆ, ಕೊಲೆ ಮಾಡಿದಂತ ರಾಜು, ಕುಮಾರ್ ಹಾಗೂ ತೇಜಸ್ ಎಂಬುವನ್ನು ಬಿಂಡಿಗನವಿಲೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಮೋಹನ್ ಕೊಲೆಯ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೇ.10ರಂದು ಕ್ರಷರ್ ನಡೆಸುತ್ತಿದ್ದಂತ ರಾಜು ಕಲ್ಲು ಕ್ವಾರಿಗೆ, ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮದ ಆರೋಪದ ಮೇಲೆ ಕ್ರಷರ್ ಬಂದ್ ಮಾಡಿಸಿದ್ದರು.
ಹೀಗೆ ಅಧಿಕಾರಿಗಳು ದಾಳಿ ನಡೆಸಿ, ಕ್ರಷರ್ ಬಂದ್ ಮಾಡಿಸಿದ್ದರ ಹಿಂದೆ ಮೋಹನ್ ಕೈವಾಡವಿದೆ ಎಂಬುದಾಗಿ ಶಂಕಿಸಿದಂತ ಆರೋಪಿಗಳು, ಮೇ.15ರಂದು ಮೋಹನ್ ಅಪಹರಿಸಿ, ಹತ್ಯೆ ಮಾಡಿದ್ದರು. ಬಳಿಕ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಂಟರ ತಾಳು ಬಳಿಯಲ್ಲಿ ಮೃತದೇಹವನ್ನು ಹೂತು ಹಾಕಿದ್ದರು.
Laxmi News 24×7