ಹಾವೇರಿ: ಮಹಾಮಾರಿ ಕೊರೊನಾದಿಂದ ಅಂಬುಲೆನ್ಸ್, ಬೆಡ್ ಸಿಗುತ್ತಿಲ್ಲ ಎಂಬ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತನನ್ನು ಸೇರಿಸಿಕೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ.
ಹಾವೇರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಉಂಟಾಗಿದೆ. ಇದರಿಂದ ಸುಮಾರು ಎರಡು ಗಂಟೆ ಸಮಯ ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್‌ನಲ್ಲೇ ಕೊರೊನಾ ಸೋಂಕಿತ ಕುಳಿತಿದ್ದರು.
ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಹೀಗಾಗಿ ಬೆಡ್ ಖಾಲಿ ಆಗುವರೆಗೂ ಕಾಯಿರಿ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ಸೋಂಕಿತ ಅಂಬುಲೆನ್ಸ್‌ನಲ್ಲಿಯೇ ಕುಳಿತಿದ್ದರು.
ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಕೋವಿಡ್ 19 ಆಸ್ಪತ್ರೆ ಮುಂದೆ ಎರಡು ಗಂಟೆ ಸಮಯ ಅಂಬುಲೆನ್ಸ್ ನಿಂತಿತ್ತು. ಕೊನೆಗೆ ಎರಡು ಗಂಟೆಯ ನಂತರ ಸೋಂಕಿತನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಂಡಿದ್ದಾರೆ. ಈ ಮೂಲಕ ಕೊರೊನಾ ಸೋಂಕಿತರ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.