Breaking News

ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ಫಲಕವನ್ನು ಹಿಡಿದು ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ.

Spread the love

ದುಬೈ: ಸುಡಾನ್​​​ ಮೂಲದ ಯುವತಿಯೊಬ್ಬಳು ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ. ವರ ಬೇಕು ಎಂಬ ಭಿತ್ತಿ ಫಲಕವನ್ನು ಹಿಡಿದು ಸುಡಾನ್​ನ ರಾಜಧಾನಿ ಖಾರ್ಟೂಮ್​ನ ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್​ ಆಗಿದೆ.

ಅದರಲ್ಲಿ ಯುವತಿ ಟ್ರಾಫಿಕ್​ ಸಿಗ್ನಲ್​ ಬಳಿ ಭಿತ್ತಿ ಫಲಕ ಹಿಡಿದು ನಿಂತಿದ್ದಾಳೆ. ನನಗೆ ವರ ಬೇಕಿದ್ದಾನೆ. ನಾನು ಮದುವೆಯಾಗಬೇಕಿದೆ. ನಾನು ಬಹುಪತ್ನಿತ್ವ ಸ್ವೀಕರಿಸಲೂ ಸಿದ್ಧಳಾಗಿದ್ದೇನೆ ಎಂಬ ಬರಹ ಯುವತಿ ಹಿಡಿದಿರುವ ಭಿತ್ತಿ ಫಲಕದಲ್ಲಿದೆ. ಅಲ್ಲದೆ, ಮೊಬೈಲ್​ ನಂಬರ್​ ಕೂಡ ಅದರಲ್ಲಿದೆ.

ಫೋಟೋ ವೈರಲ್​ ಆಗುತ್ತಿದ್ದಂತೆ ಯುವತಿ ಬಹು ಚರ್ಚೆಯ ವಿಷಯವಾಗಿದ್ದಾಳೆ. ಕಳೆದ ಕೆಲವು ವರ್ಷಗಳಿಂದ, ಸುಡಾನ್​ನಲ್ಲಿ ಮದುವೆ ದರದಲ್ಲಿ ಗಮನಾರ್ಹ ಕುಸಿತ ಮತ್ತು ವಿಚ್ಛೇದನಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ವರದಿಯಾಗಿದೆ.

ಸುಡಾನ್​ನಲ್ಲಿ 2020ರಲ್ಲಿ ಮದುವೆ ದರವು 2018ಕ್ಕೆ ಹೋಲಿಸಿದರೆ ಶೇಕಡ 21 ರಷ್ಟು ಕಡಿಮೆಯಾಗಿದೆ. 2018ರಲ್ಲಿ 1,80,563 ಮದುವೆ ನೋಂದಣಿಯಾಗಿದ್ದವು. ಈ ಸಂಖ್ಯೆಗೆ ಹೋಲಿಸಿದರೆ 2020ರಲ್ಲಿ 142,949 ವಿವಾಹಗಳು ನಡೆದಿದ್ದು, ಕುಸಿತ ಕಂಡಿದೆ. ತಜ್ಞರ ಪ್ರಕಾರ, ಸುಡಾನ್‌ನಲ್ಲಿನ ಕೆಟ್ಟ ಆರ್ಥಿಕ ಪರಿಸ್ಥಿತಿ ಮತ್ತು ಸಾಂಕ್ರಾಮಿಕದ ಪ್ರಭಾವ ಸೇರಿದಂತೆ ಹಲವು ಕಾರಣಗಳು ದೊಡ್ಡ ಕುಸಿತಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ

Spread the loveಸವದತ್ತಿ; ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ ಧಾರವಾಡದ ಮುರುಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ