Breaking News

ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್ ಗೋರಿ ಪಾಳ್ಯದ ಬಸ್ಸು, ಜಮೀರಣ್ಣ: ಡಿಕೆ ಟೀಂನ ಉಪಾಧ್ಯಕ್ಷ ನಲಪಾಡ್, ಇಬ್ಬರಿಗೂ ಸಾಬ್ರೇ ಬೇಕು!

Spread the love

ಮಂಡ್ಯ: ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪು ಸಿದ್ದರಾಮಯ್ಯ ಪರ ಇದ್ದರೆ, ಮತ್ತೊಂದು ಗುಂಪು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪರ ಇದೆ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಟೀಕಿಸಿದ್ದಾರೆ.

ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋರಿ ಪಾಳ್ಯದ ಬಸ್ಸು ಸಿದ್ದರಾಮಯ್ಯ ಟೀಂನ ವೈಸ್‌ ಕ್ಯಾಪ್ಟನ್‌ ಆಗಿ ಜಮೀರಣ್ಣ ಇದ್ದಾರೆ.

ಡಿ.ಕೆ.ಶಿವಕುಮಾರ್‌ ಟೀಂನ ವೈಸ್‌ ಕ್ಯಾಪ್ಟನ್‌ ಆಗಿ ನಲಪಾಡ್‌ ಕೆಲಸ ಮಾಡುತ್ತಿದ್ದಾರೆ, ಇಬ್ಬರಿಗೂ ಸಾಬ್ರೇ ಬೇಕು. ಕಾಂಗ್ರೆಸ್ನಲ್ಲಿ ಹಿಂದೂಗಳಿಗೆ ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ಬರುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಇಬ್ಬರಿಗೂ ಮುಸ್ಲಿಮರು ಓಟ್‌ ಬ್ಯಾಂಕ್‌ ಆಗಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿ ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಿಸಿ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದರು ಎಂದು ಆರೋಪಿಸಿದರು.


Spread the love

About Laxminews 24x7

Check Also

ಹಸಿದ ಹೊಟ್ಟೆಗೆ ಆಸರೆ: ಮುನವಳ್ಳಿಯಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ!

Spread the love​”ಬಡವರ ಮತ್ತು ಶ್ರಮಿಕ ವರ್ಗದ ಜನರ ಹಸಿವು ನೀಗಿಸುವ ಉದ್ದೇಶದಿಂದ, ಇಂದು ಮುನವಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ