ಬೆಂಗಳೂರು, ಮೇ13: ಅದೊಂದು ಕಾರು ನಿಂತಲ್ಲೇ ನಿಂತು ಬರೊಬ್ಬರಿ ಎರಡು ವರ್ಷಗಳಾಗಿತ್ತು. ಕಾರಿಗೆ ಕಲರ್ ಫುಲ್ ಬಣ್ಣ ಬಳಿಯಲಾಗಿತ್ತು. ಮುಂಜಾನೆ ಆ ಕಾರಿನ ಬಳಿಯಲ್ಲಿ ವಿಚಿತ್ರವಾಗಿ ವಾಸನೆ ಬರತೊಡಗಿತ್ತು. ಜನರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಈ ವೇಳೆ ಬಂದು ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಪತ್ತೆಯಾಯ್ತು ಪುರುಷನ ಕೊಳೆತ ಶವ.
ಸಿನಿಮಾಗೆ ಬಳಕೆಯಾಗುತ್ತಿದ್ದ ಕಾರು..!
ರಾಜಾಜಿನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಕಲರ್ ಫುಲ್ ಆಗಿದ್ದ ಕಾರು ನಿಂತಿತ್ತು. ಎರಡು ವರ್ಷದ ಹಿಂದೆ ಸಿನಿಮಾಗಳಿಗೆ ಬಳಕೆ ಮಾಡಲಾಗಿದ್ದ ಕಾರು ಅದಾಗಿತ್ತು. ಕೋವಿಡ್ ನಂತರದಲ್ಲಿ ಕಾರನ್ನು ಬಳಕೆ ಮಾಡಿರಲಿಲ್ಲ. ಇನ್ನು ಕಾರಿನ ಮಾಲೀಕರು ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದರು. ಮನೆ ಖಾಲಿಯಾಗಿದ್ದರೂ ಕಾರು ಮಾತ್ರ ಬಿಟ್ಟು ಹೋಗಿದ್ದರಿಂದ ಕಾರು ನಿಂತಲ್ಲೇ ನಿಂತಿತ್ತು. ಇದರಿಂದಾಗಿ ಕಾರಿನ ಮಾಲೀಕರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಅಂಬಾಸಿಡರ್ ಕಾರಿನಲ್ಲಿ ಪತ್ತೆಯಾಯ್ತು ಶವ:
ಸಿನಿಮಾಗಾಗಿ ರೀ ಪೈಂಟ್ ಮಾಡಿದ್ದ ಅಂಬಾಸಿಡರ್ ಕಾರು ಸಿನಿಮಾ ನಂತರ ಬಳಕೆ ಯಾಗಿರಲಿಲ್ಲ. ಯಾಕೆಂದರೆ ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಕಾರಿನ ಬಣ್ಣವನ್ನು ಬದಲಿಸುವಂತಿಲ್ಲ. ಇದರಿಂದ ಸಂಚಾರಿ ಪೊಲೀಸರು ದಂಡ ಹಾಕುತ್ತಾರೆ. ಹೀಗಾಗಿ ಕಾರನ್ನು ಬಳಸುತ್ತಿರಲಿಲ್ಲ. ಆದರೆ ಎರಡು ವರ್ಷದಿಂದ ನಿಂತಲ್ಲೇ ನಿಂತಿದ್ದ ಕಾರನ್ನು ಗಮನಿಸಿದ ದುಷ್ಕರ್ಮಿಗಳು ಕೊಲೆಯನ್ನು ಮಾಡಿ ಕಾರಿನಲ್ಲಿ ಮೃತದೇಹವನ್ನು ಎಸೆದು ಹೋಗಿರುವ ಅನುಮಾನ ವ್ಯಕ್ತವಾಗಿದೆ.
Laxmi News 24×7