ದೆಹಲಿಯ ಷತಾಜ್ಮಹಲ್ನ ಜಾಗ ಮೂಲತಃ ನನಗೆ ಸೇರಿದ್ದು, ನಮ್ಮ ಮನೆತನಕ್ಕೆ ಸೇರಿದ್ದು ಎಂದು ಬಿಜೆಪಿ ಸಂಸದೆ ಹಾಗೂ ಜೈಪುರದ ರಾಜವಂಶಸ್ಥೆ ದಿಯಾ ಕುಮಾರಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ ಎಂದಿರುವುದು ಚರ್ಚೆಗೆ ಕಾರಣವಾಗಿದೆ.
ಇದಕ್ಕೂ ಮೊದಲು ರಿಯಾ ಕುಮಾರಿ ತಾಜ್ ಮಹಲ್ನಲ್ಲಿ ಬೀಗ ಹಾಕಿರುವ 22 ಕೋಣೆಗಳ ಬೀಗ ತೆರೆಯುವಂತೆ ನಿರ್ದೇಶಿಸಲು ಅಲಹಾಬಾದ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಜಾಗ ನನಗೆ ಸೇರಿದ್ದು ಎಂದು ವಾದಿಸಿದ್ದಾರೆ. ಅಲ್ಲದೆ ಸ್ಮಾರಕ ನಿರ್ಮಾಣಕ್ಕೂ ಮುನ್ನ ಅಲ್ಲಿ ಏನಿತ್ತು ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.