Breaking News

ಶರದ್‌ಪವಾರ್ ಭಾಷಣಕ್ಕೆ ಅಡ್ಡಿಪಡಿಸಿದ ಎಂಇಎಸ್ ಪುಂಡರು

Spread the love

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಎದುರೇ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಮರಾಠಾ ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಷಣ ಶುರುವಾಗುತ್ತಿದ್ದಂತೆ ಎಂಇಎಸ್ ಪುಂಡರು ನಾಡದ್ರೋಹ ಘೋಷಣೆ ಕೂಗಿದ್ದಾರೆ. ಮರಾಠ ಕೋ ಆಪರೇಟಿವ್ ಬ್ಯಾಂಕ್ ಅಮೃತ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಶರದ್ ಪವಾರ್, ಎಂಇಎಸ್ ಪುಂಡರ ಪೂರ್ವನಿಯೋಜಿತ ಘೋಷಣೆಗಳಿಂದ ತಬ್ಬಿಬ್ಬಾದರು.

ಶರದ್ ಪವಾರ್ ಭಾಷಣ ಶುರು ಮಾಡುತ್ತಿದ್ದಂತೆ ನಾಡದ್ರೋಹಿ ಎಂಇಎಸ್ ಪುಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ ಕೂಗಿದರು. ಸಭೆಯಲ್ಲಿ ಭಾಗಿಯಾಗಿದ್ದ ಕೆಲವು ಎಂಇಎಸ್ ಪುಂಡರು ಪುಂಡಾಟಿಕೆ ಪ್ರದರ್ಶಿಸಿದರು.

ಘೋಷಣೆ ಕೂಗುವ ವೇಳೆ ಸುಮ್ಮನೆ ನಿಂತ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಭಾಷಣ ಪ್ರಾರಂಭ ಮಾಡಬಹುದಾ? ಎಂದು ಎಂಇಎಸ್ ಕಾರ್ಯಕರ್ತರನ್ನು ಕೇಳಿ ನಿಮ್ಮ ಅನುಮತಿ ಪಡೆದು ಭಾಷಣ ಶುರುಮಾಡ್ತಿನಿ ಎಂದರು.


Spread the love

About Laxminews 24x7

Check Also

ಕಣ್ಣಿನ ಚಿಕಿತ್ಸೆಗೆ ಮಾಧುರಿ ಜಾಧವ್ ಫೌಂಡೇಶನ್ ಮೂಲಕ ಚೆಕ್ ಹಸ್ತಾಂತರ

Spread the loveಬೆಳಗಾವಿ: ಪಟಾಕಿ ಸ್ಫೋಟದಲ್ಲಿ ಕಣ್ಣು ಕಳೆದುಕೊಂಡ ಶಹಾಪುರದ ಶಿವ ಲೋಹರ್ ಅವರ ಚಿಕಿತ್ಸೆಗೆ ಸಹಾಯದ ಮಹಾಪೂರ ಹರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ