Breaking News

ಜೈಲಿನಲ್ಲಿ ಪತಿ ಕಂಡು ಕಿಂಗ್‍ಪಿನ್ ಕಣ್ಣೀರು

Spread the love

ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಆರೋಪಿ ದಿವ್ಯಾ ಹಾಗರಗಿ ಕಲಬುರಗಿ ಸೆಂಟ್ರಲ್ ಜೈಲು ಸೇರಿಕೊಂಡಿದ್ದು, ಕಣ್ಣೀರಾಕುತ್ತಿದ್ದಾಳೆ.

ಜೈಲಿನ ಬ್ಯಾರಕ್ ಹಿಂದೆ ಇದ್ದ ಪತಿ ರಾಜೇಶ್ ಕಂಡು ದಿವ್ಯಾ ಹಾಗರಗಿ ಕಣ್ಣೀರು ಹಾಕಿದ್ದಾಳೆ. ದೂರದಿಂದಲೇ ಪತಿ ರಾಜೇಶ್‍ನನ್ನು ನೋಡ್ತಿದ್ದ ಹಾಗೆಯೇ ಕುಸಿದು ಬಿದ್ದು ಕಣ್ಣೀರು ಸುರಿಸಿದ್ದಾಳೆ. ಇತ್ತ ದಿವ್ಯಾ ಕಂಡು ಜೈಲಿನ ಬ್ಯಾರಕ್ ಹಿಂದೆಯಿಂದ ರಾಜೇಶ್ ಕೂಡ ಅತ್ತಿದ್ದಾರೆ. ಒಟ್ಟಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗಂಡ-ಹೆಂಡತಿ ಕಣ್ಣೀರು ಹಾಕಿದರು. ಬಳಿಕ ದಿವ್ಯಾ ಹಾಗರಗಿಯನ್ನ ಮಹಿಳಾ ಬ್ಯಾರಕ್ ನಲ್ಲಿ ಹಾಕಿ ಸಿಬ್ಬಂದಿ ಲಕ್ ಮಾಡಿದರು.

ದಿವ್ಯಾ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್ ನಲ್ಲಿ ಹಾಕುವಂತೆ ಪಟ್ಟು ಹಿಡಿದಿದ್ದಳು. ತನ್ನ ಶಾಲೆಯ ಶಿಕ್ಷಕರ ಬ್ಯಾರಕ್ ನಲ್ಲಿಯೇ ಇರೊದಾಗಿ ಹಠ ಮಾಡಿದ್ದಳು. ಆದರೆ ಜೈಲು ಸಿಬ್ಬಂದಿ ದಿವ್ಯಾ ಹಣಕ್ಕೆ ಮಣಿಯದೆ 18219 ದಿವ್ಯಾಳ ಕೈದಿ ನಂಬರ್ ನೀಡಿ ಪ್ರತ್ಯೇಕ 9ನೇ ಬ್ಯಾರಕ್ ನಲ್ಲಿ ಕೂಡಿ ಹಾಕಿದ್ದಾರೆ. ದಿನದ 24 ಗಂಟೆಯು ಲಾಕ್ ಆಗಿರುವ ಬ್ಯಾರಕ್ ನಲ್ಲಿ ದಿವ್ಯಾಳನ್ನ ಹಾಕಿದ್ದಾರೆ.

ದಿವ್ಯಾಳ ಯಾವ ಬೇಡಿಕೆಯನ್ನ ಪೂರೈಸೋದಕ್ಕೆ ಆಗೋದಿಲ್ಲ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಸವಲತ್ತೇ ನೀಡುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡ್ತೀವಿ: ಸಿದ್ದರಾಮಯ್ಯ

Spread the loveರಾಯಚೂರು: ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡುತ್ತೇವೆ. ಬಹಳ ಹೆಚ್ಚು ಅಂದ್ರೆ ಎರಡು ತಿಂಗಳಾಗಬಹುದು ಎಂದು ಮುಖ್ಯಮಂತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ