ಉಜ್ಜಯಿನಿ : ಮಧ್ಯಪ್ರದೇಶದಲ್ಲಿ ಮದ್ಯದ ಕಲಬೆರಕೆಯ ಅತ್ಯಂತ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉಜ್ಜಯಿನಿಯಲ್ಲಿ ವ್ಯಕ್ತಿಯೊಬ್ಬರು ಮದ್ಯದಲ್ಲಿ ಕಲಬೆರಕೆ ಮಾಡುತ್ತಿರುವ ಬಗ್ಗೆ ರಾಜ್ಯದ ಗೃಹ ಸಚಿವರು ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬಾಟಲಿ ಪೂರ್ತಿ ಕುಡಿದರೂ ನಶೆಯೇರಲಿಲ್ಲ ಅಂಥ ವ್ಯಕ್ತಿಯೊಬ್ಬ ಹೇಳಿದ್ದು, ಗುತ್ತಿಗೆದಾರರು ಮದ್ಯಕ್ಕೆ ನೀರು ಬೆರೆಸುತ್ತಿದ್ದಾರೆ ಇದರಿಂದ ಕುಡಿತದ ಅಮಲು ಬರುತ್ತಿಲ್ಲ ಅಂತ ಪತ್ರದಲ್ಲಿ ತನ್ನ ಗೋಳು ತೋಡಿಕೊಂಡಿದ್ದಾನೆ.
ಉಜ್ಜಯಿನಿಯ ಬಹದ್ದೂರ್ ಗಂಜ್ ಆರ್ಯ ಸಮಾಜ ಮಾರ್ಗದಲ್ಲಿ ನೆಲೆಸಿರುವ ಲೋಕೇಂದ್ರ ಕುಡಿತದ ಚಟ ಹೊಂದಿದ್ದು, ಕಳೆದ 20 ವರ್ಷಗಳಿಂದ ಮದ್ಯಪಾನ ಮಾಡುತ್ತಿದ್ದಾನೆ ಅಂತೆ. ಏಪ್ರಿಲ್ 12 ರಂದು ಕ್ಷೀರಸಾಗರ ಪ್ರದೇಶದಲ್ಲಿ ಇರುವ ಮದ್ಯದಂಗಡಿಯಿಂದ ನಾಲ್ಕು ಕ್ವಾರ್ಟರ್ ದೇಶೀಯ ಮದ್ಯವನ್ನು ಖರೀದಿಸಿದ್ದ ಎನ್ನಲಾಗಿದ್ದು, ಆ ವೇಳೆಯಲ್ಲಿ ಎರಡು ಕ್ವಾರ್ಟರ್ ಕುಡಿದು ನೋಡಿದಾಗ ಆತ ನಶೆ ಏರಲಿಲ್ಲವಂತೆ.ಬಾಟಲಿ ಪೂರ್ತಿ ಕುಡಿದರೂ ಮದ್ಯ ಏರದಿದ್ದಾಗ ಅದರಲ್ಲಿ ಕಲಬೆರಕೆ ಇರುವ ಶಂಕೆ ವ್ಯಕ್ತವಾಗಿದೆ ಎಂದು ಲೋಕೇಂದ್ರ ಹೇಳಿದ್ದು
, ಇದೇ ವೇಳೆ, ಆತ ಅಂಗಡಿಯವರಿಗೆ ದೂರು ನೀಡಿದಾಗ, ಅವನು ನಿನಗೆ ಏನು ಬೇಕಾದರೂ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಅಂತ ಗೃಹಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾನೆ.
Laxmi News 24×7