Breaking News

ಗಮನಿಸಿ: ಕರ್ನಾಟಕದಲ್ಲಿ ಈ ವೀಕೆಂಡ್‌ನಲ್ಲಿ ಎಣ್ಣೆ ಸಿಗಲ್ಲ!

Spread the love

ಬೆಂಗಳೂರು, ಮೇ 5: ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್ ಪಾರ್ಟಿ ಮಾಡಬೇಕು. ಸ್ಯಾಲರಿ ಬಂದಿರುವ ಖುಷಿಯಲ್ಲಿ ಫ್ರೆಂಡ್ಸ್ ಜೊತೆ ಗುಂಡು ಹಾಕಬೇಕು ಎಂದುಕೊಂಡಿರುವ ಮದ್ಯಪ್ರಿಯರಿಗೆಲ್ಲ ಒಂದು ಶಾಕಿಂಗ್ ನ್ಯೂಸ್. ಶುಕ್ರವಾರದಿಂದಲೇ ರಾಜ್ಯದಲ್ಲಿ ಮುಂದಿನ ಮೇ 19ವರೆಗೂ ಎಣ್ಣೆ ಸಿಗುವುದಿಲ್ಲ.

 

ರಾಜ್ಯದಲ್ಲಿ ಮೇ 6 ರಿಂದ 19ರವರೆಗೂ ಮದ್ಯ ಮಾರಾಟಗಾರರು ಮುಷ್ಕರ ನಡೆಸುವುದಕ್ಕೆ ನಿರ್ಧರಿಸಿದ್ದಾರೆ. ಇದರಿಂದ ಮುಂದಿನ 15 ದಿನಗಳವೆರಗೂ ಮದ್ಯಪ್ರಿಯರಿಗೆ ಎಣ್ಣೆ ಸಿಗುವುದೇ ಅನುಮಾನವಾಗಿದೆ.

ಉಡುಪಿಯಲ್ಲಿ ಮಾತನಾಡಿದ ರಾಜ್ಯ ಮದ್ಯ ಮಾರಾಟಾಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಈ ಕುರಿತು ಘೋಷಿಸಿದ್ದಾರೆ.

“ಕರ್ನಾಟಕದಲ್ಲಿ ಕೆಎಸ್‌ಪಿಸಿಎಲ್ ಎಂಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಲಿ, ಅಬಕಾರಿ ಸಚಿವರಾಗಲಿ ನಮ್ಮ ಕೈಗೆ ಸಿಗುತ್ತಿಲ್ಲ. ಒಂದು ದಿನ ಮದ್ಯ ಖರೀದಿ ಮಾಡದಿದ್ದರೆ 70 ಕೋಟಿ ರೂಪಾಯಿ ನಷ್ಟವಾಗುತ್ತದೆ. ಈ ಹಿನ್ನೆಲೆ ವಿಭಾಗ ಹಂತದಲ್ಲಿ ಮದ್ಯ ಖರೀದಿ ಮಾಡದಂತೆ ಸೂಚನೆ ನೀಡಲಾಗಿದೆ” ಎಂದು ಹೇಳಿದ್ದಾರೆ.

ಮೇ.19ರವರೆಗೂ ನಿರಂತರ ಮುಷ್ಕರ: ಕಲಬುರಗಿ ವಿಭಾಗದಲ್ಲಿ ಶುಕ್ರವಾರ ಮದ್ಯ ವ್ಯಾಪಾರಿಗಳಿಂದ ಮುಷ್ಕರ ನಡೆಸಲಾಗುತ್ತದೆ. ಹೊಸಪೇಟೆ, ಬೆಳಗಾವಿ, ಮೈಸೂರು ಮತ್ತು ಮಂಗಳೂರು ವಿಭಾಗದಲ್ಲಿಯೂ ಮದ್ಯ ಸಿಗುವುದಿಲ್ಲ. ಮುಂದಿನ ಮೇ 19ರವರೆಗೂ ನಿರಂತರವಾಗಿ ವಿವಿಧ ಜಿಲ್ಲೆಗಳಲ್ಲಿ ಮುಷ್ಕರ ನಡೆಸುವುದರ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.

ಯಾವ ಜಿಲ್ಲೆಯಲ್ಲಿ ಯಾವಾಗ ಸಿಗಲ್ಲ ಮದ್ಯ?

* ಮೇ 6: ಕಲಬುರಗಿ ವಿಭಾಗದಲ್ಲಿ ಮುಷ್ಕರ ನಡೆಯಲಿದ್ದು, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ ಮದ್ಯ ಸಿಗುವುದಿಲ್ಲ

* ಮೇ 10: ಹೊಸಪೇಟೆ ವಿಭಾಗದಲ್ಲಿ ಮುಷ್ಕರ ನಡೆಸಲಾಗುತ್ತದೆ. ಅಂದು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ಬಾಗಲಕೋಟೆ, ವಿಜಯಪುರ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮದ್ಯ ಪ್ರಿಯರಿಗೆ ಮದ್ಯ ಸಿಗುವುದಿಲ್ಲ.


Spread the love

About Laxminews 24x7

Check Also

ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ!

Spread the love ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ! ಸಚಿವ ಶರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ