ನಾವು ಕಲ್ಲೂರು ಮಠದ ಸ್ವಾಮೀಜಿ, ಮಠಕ್ಕೆ ರಾಜಕಾರಣಿಗಳಿಂದ 350 ಕೋಟಿ ಹಣ ಬಂದಿದೆ ಎಂದು ಗುತ್ತಿಗೆದಾರನನ್ನ ನಂಬಿಸಿ 3 ಲಕ್ಷಕ್ಕೆ ಟೋಪಿ ಹಾಕಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಮೂಲದ ವಿಜಯ್‌ಕುಮಾರ್ ಅವರೇ ವಂಚನೆಗೆ ಒಳಗಾದವರು. ಮಠಕ್ಕೆ ರಾಜಕಾರಣಿಗಳಿಂದ ಅನುದಾನ ಬಂದಿದ್ದು, ಇದನ್ನು ಸಾಲದ ರೂಪದಲ್ಲಿ ಜನರಿಗೆ ನೀಡುತ್ತಿದ್ದೇವೆ ಎಂದು ನಂಬಿಸಿದ್ದಾರೆ.
ಕಾವಿ ಬಟ್ಟೆ ಧರಿಸಿದ ಖದೀಮರು ಶಿವಮೊಗ್ಗದಲ್ಲಿ ವಿಜಯ್‌ಕುಮಾರ್ ನನ್ನ ಭೇಟಿಯಾಗಿದ್ದರು. 3 ಲಕ್ಷ ಹಣ ಕೊಡಿ, ನಾವು 10 ಲಕ್ಷ ಕೊಡುತ್ತೇವೆ. ಉಳಿದ ಹಣವನ್ನ 6 ತಿಂಗಳಿಗೆ ತಲಾ 50 ಸಾವಿರ ನೀಡಿ ತೀರಿಸಿ ಎಂದು ಹೇಳಿ ನಂಬಿಸಿದ್ದರು. ವಿಜಯ್‌ಕುಮಾರ್ ಸ್ವಾಮೀಜಿಗಳ ಮಾತಿಗೆ ಮರುಳಾಗಿ ನನಗೆ 10 ಲಕ್ಷ ಹಣ ಬೇಕು ಎಂದು ಕೇಳಿದ್ದಾರೆ. ಆಗ ಸ್ವಾಮೀಜಿಗಳು ನಮ್ಮ ಬಳಿ ಬರೀ 100 ರೂಪಾಯಿಯ ನೋಟುಗಳಿವೆ. ಈ ಡಿಸೆಂಬರ್ ವೇಳೆಗೆ 100 ರೂಪಾಯಿ ಮುಖ ಬೆಲೆಯ ನೋಟುಗಳು ಬ್ಯಾನ್ ಆಗುತ್ತವೆ ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿದ ಗುತ್ತಿಗೆದಾರ ವಿಜಯ್ ಒಪ್ಪಿ ಸಾಲ ಪಡೆಯಲು ಮುಂದಾಗಿದ್ದಾರೆ. ಖದೀಮರು ಹೇಳಿದಂತೆ ಬಾಳೆಹೊನ್ನೂರಿಗೆ ಬಂದು ವಿಜಯ್‌ಕುಮಾರ್ 3 ಲಕ್ಷ ರೂ. ಹಣ ನೀಡಿದ್ದಾರೆ.
ಬಾಳೆಹೊನ್ನೂರಿಗೆ ಬಂದ ನಂತರ ವಿಜಯ್‌ನಿಂದ 3 ಲಕ್ಷ ಪಡೆದ ಸ್ವಾಮೀಜಿಗಳು 100ರ ಮುಖಬೆಲೆಯುಳ್ಳ ನೋಟುಗಳು ಕಾಣುವಂತೆ ಸಿದ್ಧಪಡಿಸಿದ್ದ ಮರದ ಬಾಕ್ಸ್‌ವೊಂದನ್ನು ನೀಡಿದ್ದಾರೆ. ವಿಜಯ್ ಅದನ್ನ ಕಂಡು ಎಲ್ಲಾ 100 ರೂಪಾಯಿಗಳೇ ಎಂದು ನಂಬಿ 3 ಲಕ್ಷ ಹಣ ಕೊಟ್ಟಿದ್ದಾರೆ. ವ್ಯವಹಾರ ಮುಗಿಸಿದ ಪೇಪರ್ ತುಂಬಿದ್ದ ಮರದ ಬಾಕ್ಸ್ ನೀಡಿ ಹಣ ಎಣಿಸಿಕೊಳ್ಳಿ ಎಂದು ಹೋಗಿದ್ದಾರೆ