Breaking News

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ!

Spread the love

ನೆಲಮಂಗಲ: ಮದ್ವೆಯಾಗಿ ಇಬ್ಬರು ಮಕ್ಕಳಿದ್ದರೂ ಈತನಿಗೆ ನಾದಿನಿ ಮೇಲಿತ್ತು ಮೋಹ. ಇದಕ್ಕೆ ಅಡ್ಡಿಯಾದ ಪತ್ನಿಯನ್ನೇ ಕೊಂದ ಗಂಡ ಸುಳ್ಳು ಕಥೆ ಕಟ್ಟಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಇಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ನಡೆದಿದೆ.

 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಲೂರು ಗ್ರಾಮದ ಶ್ವೇತಾ (30) ಮೃತ ದುರ್ದೈವಿ. ಹಿರಿಯೂರು ತಾಲೂಕಿನ ಕುರುಬರಹಳ್ಳಿ ಚೌಡೇಶ್​ (35) ಆರೋಪಿ. 9 ವರ್ಷಗಳ ಹಿಂದೆ ಶ್ವೇತಾ ಮತ್ತು ಚೌಡೇಶ್​ಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಉದ್ಯೋಗ ಅರಸಿ ನೆಲಮಂಗಲಕ್ಕೆ ಬಂದಿದ್ದ ಚೌಡೇಶ್​ ದಂಪತಿ ತೊಣಚಿನಕುಪ್ಪೆ ಗ್ರಾಮದ ಬಾಡಿಗೆ ಮನೆಯಲ್ಲಿದ್ದರು. ತೊಣಚಿನಕುಪ್ಪೆ ಬಳಿಯ ಬಾರ್​ನಲ್ಲಿ ಕ್ಯಾಶಿಯರ್​ ಆಗಿದ್ದ ಚೌಡೇಶ್​, 3 ವರ್ಷದ ಹಿಂದೆ ನಿವೇಶನ ಖರೀದಿಸಿ, ಮನೆ ಕಟ್ಟಿಕೊಂಡು ವಾಸವಿದ್ದ.

ಲೋ ಬಿಪಿಯಿಂದ ಸತ್ತಿದ್ದಾಗಿ ಕತೆ: ಇದ್ದಕ್ಕಿದ್ದಂತೆ ಮಂಗಳವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ವೇತಾಳನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದ ಚೌಡೇಶ್​, ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದಾಗಿ ಹೇಳಿದ್ದ. ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರಿಂದ ಶವವನ್ನು ಮನೆಗೆ ಕೊಂಡೊಯ್ದ ಬಳಿಕ ಸಹೋದರ ಜಗನ್ನಾಥ್​ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದ. ಬುಧವಾರ ನಸುಕಿನ 3 ಗಂಟೆಯಲ್ಲಿ ಆಲೂರಿಗೆ ತೆರಳಿದ ಜಗನ್ನಾಥ್​, ಶ್ವೇತಾಳ ಪಾಲಕರಿಗೆ ಮಾಹಿತಿ ನೀಡಿದ್ದ. ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನೆಲಮಂಗಲಕ್ಕೆ ಬಂದಾಗ ಆಕೆ ಸತ್ತಿರುವ ವಿಷಯ ಗೊತ್ತಾಗಿದೆ. ಶವ ಪರಿಶೀಲಿಸಿದಾಗ ಥಳಿಸಿದ್ದಲ್ಲದೆ, ಕುತ್ತಿಗೆ ಬಿಗಿದಿರುವ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಶ್ವೇತಾ ಪಾಲಕರು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.


Spread the love

About Laxminews 24x7

Check Also

ಲಿಂಗರಾಜ ಕಾಲೇಜಿಗೆ ಸಮಗ್ರ ವೀರಾಗ್ರಣಿ ಲಿಂಗರಾಜ ಕಾಲೇಜು ಸತತ 9 ನೇ ಬಾರಿ ಚಾಂಪಿಯನ್

Spread the love ಬೆಳಗಾವಿ: ವಿದ್ಯಾರ್ಥಿಗಳು ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್, ಒಲಂಪಿಕ್ಸ್ ಕ್ರೀಡಾಕೂಟಗಳವರೆಗೂ ತಲುಪಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ