ವಿಜಯಪುರ : ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್ ಸಹೋದರನ ಹೆಸರು ಕೇಳಿಬಂದಿರುವುದರ ಕುರಿತು ತನಿಖೆಯಾಗಬೇಕು. ಇದರಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೆ ತನಿಖೆಯಾಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರವೇ ಇದನ್ನು ತನಿಖೆ ಮಾಡಿದೆ. ನಮ್ಮ ಸರ್ಕಾರದಿಂದಲೇ ಈ ಪ್ರಕರಣ ಹೊರಗೆ ಬಂದಿದೆ.
ಹಿಂದೆ ಕೂಡ ಇಂತಹ ಡೀಲ್ ನಡೆದಿವೆ, ಇದೆ ಮೊದಲೇನಲ್ಲ. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಕೊಟ್ಟಿದೆ. ಸಿಐಡಿ ಒಳ್ಳೆಯ ರೀತಿ ಯಿಂದ ತನಿಖೆ ಮಾಡುತ್ತಿದೆ. ಯಾವುದೇ ಮುಲಾಜಿಲ್ಲದೆ ತನಿಖೆ ಮಾಡ್ತಿದೆ. ಅಶ್ವತ್ಥ ನಾರಾಯಣರ ಸಹೋದರನ ಪಾತ್ರ ಎಷ್ಟಿದೆ ಅನ್ನೋದನ್ನ ತನಿಖೆ ಮಾಡ್ತಾರೆ. ತಪ್ಪಿದ್ದರೆ ಅರೆಸ್ಟ್ ಮಾಡ್ತಾರೆ, ಯಾರನ್ನು ಬಿಡೋದಿಲ್ಲ ಅಂತ ಸಿಎಂ ಹೇಳಿದ್ದಾರೆ. ಸುಮ್ಮನೆ ಸಂಶಯ ಪಡೋದು ಬೇಡ. ಅಶ್ವತ್ಥ ನಾರಾಯಣ ಅವರ ಸಹೋದರನ ಪಾತ್ರ ಇದ್ದರೆ ಪಕ್ಷ ಸರಿಯಾದ ಕ್ರಮ ತೆಗೆದುಕೊಳ್ಳುತ್ತೆ ಎಂದು ಹೇಳಿದರು.
Laxmi News 24×7