ಧಾರವಾಡ: ಪಾರ್ಶ್ವವಾಯು ಪೀಡಿತ ಉಪನ್ಯಾಸಕರೊಬ್ಬರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಸಹಾಯಕ್ಕೆ ಮುಂದಾಗಬೇಕೆಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.
ಧಾರವಾಡದ ನಿಸರ್ಗ ಲೇಔಟ್ ನಲ್ಲಿರುವ ಮಹಾದೇವ್ ಮಾಳಗಿ ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. 1999ರಲ್ಲಿ ಕೆಇಎಸ್ ಪರೀಕ್ಷೆಯಲ್ಲಿ ಪಾಸಾದ ನಂತರ ಶಿಕ್ಷಣ ಇಲಾಖೆಯಲ್ಲಿ 15 ವರ್ಷ ಸರ್ವಿಸ್ ಮಾಡಿದ್ದಾರೆ. ಬಿಇಓ ಆಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮಹಾದೇವ್ ಮಾಳಗಿ ಅವರು ಹಿರಿಯ ಉಪನ್ಯಾಸಕರಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಾರ್ಶ್ವವಾಯುಗೆ ತುತ್ತಾಗಿದ್ದರು.ಅಂದಿನಿಂದ ಮಹಾದೇವ್ ಮಾಳಗಿ ಅವರಿಗೆ ಸಂಬಳವೂ ಬಂದಿಲ್ಲ ಮತ್ತು ಇಲಾಖೆಯಿಂದ ಯಾವುದೇ ಸಹಾಯ ದೊರೆತಿಲ್ಲ. ಮಹಾದೇವ್ ಅವರ ಚಿಕಿತ್ಸೆಗಾಗಿ ಆಸ್ತಿ ಮಾರಾಟ ಮಾಡಿ ಆಸ್ಪತ್ರೆ ಬಿಲ್ ಪಾವತಿಸುತ್ತಿದ್ದಾರೆ. ಸ್ವಯಂ ನಿವೃತ್ತಿ ಪಡೆಯಲು ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ರೂ ಕಾನೂನು ತೊಡಕು ಉಂಟಾಗಿದೆ. ಹೀಗಾಗಿ ಈ ಅಧಿಕಾರಿ ಕುಟುಂಬ ಈಗ ಸಮಸ್ಯೆಗೆ ಸಿಲುಕಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಚಿಕಿತ್ಸೆ ಹಣ ಇಲ್ಲದೇ ಪರದಾಟ ನಡೆಸಿದೆ. ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ ಇವರ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
Laxmi News 24×7