ಈಗಾಗಲೇ ಈ ಬಗ್ಗೆ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ (Government) ಮುಂದಾಗಿದೆ ಅಂತ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ (Health Minister Dr. K.Sudhakar) ಹೇಳಿದ್ದಾರೆ. ಬೆಂಗಳೂರಿನ (Bengaluru) ಬಗ್ಗೆ ಹೆಚ್ಚಿನ ಜಾಗೃತೆ ತೆಗೆದುಕೊಳ್ಳಲು ತಜ್ಞರು ಸೂಚಿಸಿದ್ದಾರೆ. ಆದರೆ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕೊರೋನಾ ಬೂಸ್ಟರ್ ಡೋಸ್ (Corona Booster Dose) ಅಭಾವ ಎದುರಾಗಿದೆ.
ಕೊರೋನಾ 4ನೇ ಅಲೆಯ ಟೆನ್ಶನ್
ಜೂನ್ ಹೊತ್ತಲ್ಲಿ ಮತ್ತೊಂದು ಸುತ್ತಿನ ಕೊರೋನಾ ಹಲ್‌ಚಲ್ ನಡೆಯುವ ಸಂಭವವಿದೆ. ತಜ್ಞರು ಇದನ್ನು ಖಚಿತಪಡಿಸಿದ್ದು, ಸರ್ಕಾರ ಕೂಡ ಈ ಬಗ್ಗೆ ಚಿಂತನೆಗೆ ಬಿದ್ದಿದೆ. ಹೀಗಾಗಿ ಜನ ಸಾಮಾನ್ಯರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಈಗಾಗಲೇ ಮೊದಲ ಡೋಸ್ ಹಾಗೂ ಎರಡನೇ ಡೋಸ್ ಲಸಿಕೆಯೇ ಪೂರ್ಣ ಪ್ರಮಾಣದಲ್ಲಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಸಹಜವಾಗಿಯೇ ಭೀತಿ ಇಮ್ಮಡಿಯಾಗಿದೆ.