ಕೊಪ್ಪಳ: ಜನರಿಗೆ ಬರೋ ಪತ್ರ ತಲುಪಿಸಬೇಕಾದಂತ ಕೆಲಸ ಮಾಡಬೇಕಿದ್ದ ಪೋಸ್ಟ್ ಮ್ಯಾನ್ ( Post Man ) .. ಆರಂಭದಲ್ಲಿ ಉತ್ತಮ ಕೆಲಸಗಾರ, ಸಖತ್ ಒಳ್ಳೆಯ ಪೋಸ್ಟ್ ಮ್ಯಾನ್ ಎನಿಸಿಕೊಂಡು, ಆನಂತ್ರ ಮಾಡಿದ್ದು ಮಾತ್ರ ಪೋಸ್ ಮ್ಯಾನ್ ಕೆಲಸ. ಈ ಕಾರಣಕ್ಕೆ ಅದೆಷ್ಟೋ ರೈತರು ಜಮೀನು ಹರಾಜಿಗೆ ಬಂದ್ರೇ, ಹೆಂಗಳೆಯರು ಇಷ್ಟದ ಚಿನ್ನಾಭರಣವನ್ನೇ ಕಳೆದುಕೊಳ್ಳುವಂತಾಗಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿಯ ಗೌರಿಪುರ ಗ್ರಾಮದಲ್ಲಿ ಪೋಸ್ಟ್ ಮ್ಯಾನ್ ಆಗಿ ನೇಮಕಗೊಂಡಿದ್ದಂತ ವಿನಯ ಎಂಬುವರ ಸ್ಟೋರಿಯೇ ಇದು. ಈತ ಗೌರಿಪುರ ಅಂಚೆಕಚೇರಿ ವ್ಯಾಪ್ತಿಯ ಬಸರಿಹಾಳ, ಬೈಲಕ್ಕಂಪುರ, ಚಿಕ್ಕ ವಡ್ಡರಕಲ್ ಮತ್ತು ದೇವಲಾಪುರ ಗ್ರಾಮಗಳಿಗೆ ಪೋಸ್ಟ್ ಮ್ಯಾನ್ ಆಗಿ ನೇಮಕಗೊಂಡಿದ್ದರು.
ಕೆಲಸಕ್ಕೆ ಸೇರಿದಂತ ಮೊದಲ 2-3 ವರ್ಷ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ ವಿನಯ, ಆನಂತ್ರದ ದಿನಗಳಲ್ಲಿ ಪೋಸ್ಟ್ ಮ್ಯಾನ್ ಕೆಲಸ ಬಿಟ್ಟು, ಪೋಸ್ ಮ್ಯಾನ್ ಆಗಿದ್ದಾರೆ. ಇವರ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಬರೋ ಒಂದೇ ಒಂದು ಪೋಸ್ಟ್ ಗಳನ್ನು ಕಳೆದ 8 ವರ್ಷಗಳಿಂದ ಕೊಟ್ಟಿಲ್ಲ.
ಹೀಗೆ ಕಳೆದ 8 ವರ್ಷಗಳಿಂದ ಬಂದಂತ ಆಧಾರ್ ಕಾರ್ಡ್, ಬ್ಯಾಂಕ್ ಸಾಲದ ನೋಟಿಸ್, ಚಿನ್ನ ಅಡವಿಟ್ಟ ನೋಟಿಸ್, ನೇಮಕಾತಿ ಸಂದರ್ಶನ, ನೇಮಕಾತಿ ಜಾಯಿನ್ ಲೆಟರ್ ಸೇರಿದಂತೆ ಅನೇಕ ಪತ್ರಗಳನ್ನು ಊರಾಟೆ ಮೂಟೆ ಕಟ್ಟಿ ಬಿಸಾಕಿದ್ದಾನೆ. ಈ ಪತ್ರಗಳನ್ನು ಮಕ್ಕಳು ಓಪನ್ ಮಾಡಿ ಆಟವಾಡುತ್ತಿದ್ದಾಗ, ಪೋಸ್ಟ್ ಮ್ಯಾನ್ ವಿನಯ ಪೋಸ್ ಮ್ಯಾನ್ ಕೆಲಸ ಹೊರ ಬಂದಿದೆ. ಹೀಗಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.