Breaking News

ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೊಂದು ಕುಡಿ ಎಂಟ್ರಿ:

Spread the love

ಬೆಂಗಳೂರು: ವರನಟ ಡಾ. ರಾಜ್​ಕುಮಾರ್​ ಕುಟುಂಬದ ಅಭಿಮಾನಿಗಳಿಗೆ ಈ ದಿನ ಮರೆಯಲಾಗದ ಸುದಿನವಾಗಿದೆ. ಸ್ಯಾಂಡಲ್​​ವುಡ್​ಗೆ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ ಎಂಟ್ರಿಯಾಗಿದೆ.

ಸ್ಯಾಂಡಲ್​ವುಡ್ ‘ಯುವರಾಜ್’ನಿಗೆ ಇಂದು ಪಟ್ಟಾಭಿಷೇಕವಾಗಿದೆ.

ಯಂಗ್ ಪವರ್​ ಸ್ಟಾರ್​ ಅವರನ್ನು ಹೊಂಬಾಳೆ ಸಿನಿಮಾ ಸಂಸ್ಥೆ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು, ಹೊಸ ಸಿನಿಮಾ ಘೋಷಣೆಯಾಗಿದೆ. ಪುನೀತ್​ ರಾಜ್​ಕುಮಾರ್​ ಅವರ ನೆಚ್ಚಿನ ನಿರ್ದೇಶಕ ಸಂತೋಷ್​ ಆನಂದ​ರಾಮ್ ಯುವ ರಾಜ್​ಕುಮಾರ್​​ಗೆ ನಿರ್ದೇಶನ ಮಾಡಲಿದ್ದಾರೆ.

ಅಪ್ಪು ಸಿನಿಮಾ ಅನೌನ್ಸ್ ಮಾಡುವ ಮೂಲಕವೇ ಚಿತ್ರ ನಿರ್ಮಾಣಕ್ಕೆ ಹೊಂಬಾಳೆ ಸಿನಿಮಾ ಸಂಸ್ಥೆ ಚಿತ್ರರಂಗಕ್ಕೆ ಕಾಲಿಟ್ಟಿತು. ಅಭಿಮಾನಿಗಳ ಮನದಲ್ಲಿ ಅಪ್ಪು ಉತ್ತರಾಧಿಕಾರಿ ಆಗಿರುವ ಯುವರಾಜ್​ ಅವರನ್ನು ಹೊಂಬಾಳೆ ಫಿಲ್ಮ್ಸ್​ ಚಿತ್ರರಂಗಕ್ಕೆ ಪರಿಚಯಿಸುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹೊಂಬಾಳೆ ಸಿನಿಮಾ ಸಂಸ್ಥೆ, ಡಾ. ರಾಜ್​ಕುಮಾರ್​ ಕುಟುಂಬ ಹಾಗೂ ಹೊಂಬಾಳೆ ಸಂಸ್ಥೆ ನಡುವೆ ಇರುವ ಸಂಬಂಧದ ಮುಂದುವರಿದ ಭಾಗವಾಗಿ ನಾವು ನಮ್ಮ ಹೊಂಬಾಳೆ ಫಿಲಂಸ್​ನಲ್ಲಿ ದೊಡ್ಮನೆಯ ಮೂರನೇ ತಲೆಮಾರಿನ ಯುವರಾಜ್​ ಕುಮಾರ್​ರನ್ನು ನಾಯಕನಟನಾಗಿ ಬೆಳ್ಳಿಪರದೆಗೆ ಪರಿಚಯಿಸಲು ಹಮ್ಮೆ ಪಡುತ್ತೇವೆ. ಈ ಪ್ರಯತ್ನದಲ್ಲಿ ನಮ್ಮ ಸಂಸ್ಥೆಯಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್​ ಆನಂದ್​ ರಾಮ್​ ಅವರ ಸಾರಥ್ಯದಲ್ಲಿ ಈ ಚಿತ್ರವನ್ನು ನಿರ್ಮಿಸಲಿದ್ದೇವೆ. ನಮ್ಮ ಸಂಸ್ಥೆಯ ಚಿತ್ರಗಳಿಗೆ ನೀವು ನೀಡಿರುವ ಬೆಂಬಲವನ್ನು ಈ ಚಿತ್ರಕ್ಕೂ ನೀಡಿ ಈ ಸಂಕಲ್ಪವನ್ನು ಯಶಸ್ವಿಯಾಗಿಸಬೇಕೆಂದು ಹೊಂಬಾಳೆ ಫಿಲ್ಮ್ಸ್​ ಕೋರಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ