ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರು ವಿರುದ್ದ ಮಹಿಳೆಯೊಬ್ಬರು ಗಂಭಿರ ಆರೋಪ ಮಾಡಿದ್ದಾರೆ. ರವಿ ಡಿ ಚೆನ್ನಣ್ಣವರ ತಮ್ಮ ರಾಘವೇಂದ್ರ ಚೆನ್ನಣ್ಣವರ ವಿರುದ್ದ ರೋಜಾ ಎನ್ನುವವರು ಗಂಭಿರ ಆರೋಪ ಮಾಡಿದ್ದು, ನನಗೆ ನ್ಯಾಯಾ ನೀಡಬೇಕಾದವರು ಈಗ ನನ್ನ ಗಂಡನ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆ ಜೊತೆಗೆ ಹೊಂದಿಕೊಳ್ಳುವಂತೆ ಹೇಳುತ್ತಿದ್ದಾರೆ ಅಂಥ ರೋಜಾ ಆರೋಪಿಸಿದ್ದಾರೆ.
ಇದೇ ವೇಳೆ ರೋಜಾ ಅವರು ನಾವೇನು ಅವರ ಬಳಿ ಹೋಗಿ ಮದುವೆ ಆಗ್ತೀವಿ ಅಂಥ ಕೇಳಿಕೊಂಡು ಇರಲಿಲ್ಲ, ಅವರೇ ನಮ್ಮ ಮನೆ ಬಾಗಿಲಿಗೆ ಬಂದು ಮದುವೆಯಾಗುವಂತೆ ಮನವಿ ಮಾಡಿಕೊಂಡಿದ್ದು, ನಾನು ಮದುವೆಯಾದ ಬಳಿಕ ಅಕ್ರಮ ಸಂಬಂಧಪಟ್ಟಂತೆ ನನ್ನ ಗಂಡನ ಬಳಿ ಪ್ರಶ್ನೆ ಮಾಡಿದೆ, ಇದಲ್ಲದೇ ನನ್ನ ಗಂಡನ ಜೊತೆಗೆ ಸಂಪರ್ಕದಲ್ಲಿರುವ ಮಹಿಳೆ ನನಗೆ ಅವಾಜ್ ಹಾಕಿದ್ದಾಳೆ. ಇನ್ನು ನಮ್ಮ ಸಂಸಾರದಲ್ಲಿ ಈ ರೀತಿ ನಡೆಯುತ್ತಿದ್ದ ವೇಳೆಯಲ್ಲಿ ರವಿ ಡಿ ಚೆನ್ನಣ್ಣವನರು ಮಧ್ಯಸ್ಥಿತಿಕೆವಹಿಸಿದ್ದರು, ಆದರೆ ಈಗ ಅವರ ಮನಸ್ಥಿತಿ ಬದಲಾಗಿದೆ ಅಂತ ರೋಜಾ ಆರೋಪಿಸಿದ್ದಾರೆ.
ಇದೇ ವೇಳೆ ರೋಜ ಅವರು ರವಿ ಚನ್ನಣ್ಣನವರ್ ಈ ರೀತಿ ಮಾತನಾಡಿರುವುದಕ್ಕೆ ಬೇಸರ ಬೇಸರ ವ್ಯಕ್ತಪಡಿಸಿದ್ದು, ಅವರ ಅಕ್ಕ, ತಂಗಿಗೆ ಹೀಗೆ ಆಗಿದ್ದರೇ ಹೀಗೆ ಮಾತನಾಡುತ್ತಿದ್ದರ? ಅಂತ ಪ್ರಶ್ನೆ ಮಾಡಿದ್ದಾರೆ. ರೋಜಾ ಅವರ ತಂದೆ ನಾವು ಹೇಳುತ್ತಿರು ಮಾತು ಸುಳ್ಳಾಗಿದ್ದಾರೆ, ರವಿ ಚನ್ನಣ್ಣನವರ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಅಂಥ ಹೇಳಿದ್ದಾರೆ.