Breaking News

ದೇಶದ್ರೋಹಿ ದಾವೂದ್ ಇಬ್ರಾಹಿಂಗೆ ಜಾರಿ ಮಾಡಿದಂತೆ ದಿವ್ಯಾ ಹಾಗರಗಿಗೂ ಅರೆಸ್ಟ್​ ವಾರಂಟ್ ಜಾರಿ!

Spread the love

ಕಲಬುರಗಿ: ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ (PSI Recruitment Scam) ಅಕ್ರಮಗಳನ್ನು ಕಂಡು, ಇಂತಹ ಅಪರಾಧವೆಸಗಿರುವವರು ನಿಜಕ್ಕೂ ದೇಶದ್ರೋಹಿಗಳೇ ಸರಿ ಎಂದು ರೋಸಿಹೋದ ಜನ ಅದಾಗಲೇ ತೀರ್ಮಾನಿಸಿಯಾಗಿದೆ. ಈ ಮಧ್ಯೆ, ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು (CID) ಸಹ ಈ ಆರೋಪಿಗಳ ವಿರುದ್ಧ ದೇಶಭ್ರಷ್ಟ ದಾವೂದ್ ಇಬ್ರಾಹಿಂ 1993ರಲ್ಲಿ ಎಸಗಿದ್ದ ಮುಂಬೈ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಆ ಪ್ರಕರಣದಲ್ಲಿ ದೇಶದ್ರೋಹಿ ದಾವೂದ್ ಇಬ್ರಾಹಿಂನ ವಿರುದ್ಧ ಅರೆಸ್ಟ್​ ವಾರಂಟ್​ ಜಾರಿ (Arrest Warrant) ಮಾಡಲಾಗಿದೆ. ಅದರಂತೆ, ಪರಾರಿಯಾಗಿರುವ ದಿವ್ಯಾ ಹಾಗರಗಿ (Divya Hagaragi) ಸೇರಿದಂತೆ ಒಟ್ಟು ಆರು ಆರೋಪಿಗಳ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದ್ದಾರೆ!

ಹೌದು, ಕರ್ನಾಟಕ ಪೊಲೀಸ್​ ಇಲಾಖೆಯಲ್ಲಿ 545 ಪೊಲೀಸ್​ ಸಬ್​ ಇನ್ಸ್​ ಪೆಕ್ಟರ್​ (ಪಿಎಸ್​ಐ -PSI) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರ ದಿವ್ಯಾ ಹಾಗರಗಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಅರೆಸ್ಟ್ ವಾರಂಟ್ ಜಾರಿ ಮಾಡಿದ್ದಾರೆ. ಕಲಬುರಗಿ 3ನೇ JMFC ಕೋರ್ಟ್​​ನಿಂದ ವಾರಂಟ್ ಜಾರಿ ಮಾಡಲಾಗಿದೆ. ಮುಂಬೈ ದಾಳಿ ವೇಳೆ 1993 (Mumbai Blast Case) ದಾವೂದ್​ಗೂ ಅರೆಸ್ಟ್​ ವಾರಂಟ್ ಜಾರಿ ಮಾಡಲಾಗಿತ್ತು. ದಾವುದ್​​ ಇಬ್ರಾಹಿಂಗೂ (Dawood Ibrahim) ಕೋರ್ಟ್​​​​ ವಾರಂಟ್​​ ಜಾರಿ ಮಾಡಿದ್ದನ್ನು ಉಲ್ಲೇಖಿಸಿ, ಈ ಪ್ರಕರಣದಲ್ಲಿಯೂ ಆರೋಪಿಗಳಿಗೆ ಸಿಐಡಿ ಪೊಲೀಸರು ವಾರಂಟ್ ಕೋರಿದ್ದರು. ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಅರ್ಚನಾ, ಕಾಶಿನಾಥ್, ರವೀಂದ್ರ, ಶಾಂತಿಬಾಯಿಗೆ ವಾರಂಟ್​ ಜಾರಿ ಮಾಡಲಾಗಿದೆ. 1 ವಾರದೊಳಗೆ ಸಿಐಡಿ ಮುಂದೆ ಶರಣಾಗುವಂತೆ ವಾರಂಟ್​ ನಲ್ಲಿ ಸೂಚನೆ ನೀಡಲಾಗಿದೆ.

ತನಿಖೆಯ ಅವಧಿಯಲ್ಲಿಯೇ ಆರೋಪಿಗಳಿಗೆ ಅರೆಸ್ಟ್ ವಾರೆಂಟ್:
ಪಿ.ಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ದಿವ್ಯಾ ಸೇರಿ 6 ಜನ ಆರೋಪಿಗಳಿಗೆ ತನಿಖೆ ಅವಧಿಯಲ್ಲಿಯೇ ಆರೋಪಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ಕರ್ನಾಟಕದ ಅಪರಾಧ ಪ್ರಕರಣಗಳಲ್ಲಿ ಅಪರೂಪವಾದ ಪ್ರಕರಣ ಇದಾಗಿದೆ. ಮುಂಬೈ ಬ್ಲಾಸ್ಟ್ ಸಂದರ್ಭದಲ್ಲಿ ದಾವುದ್ ಇಬ್ರಾಹಿಂ ಗೆ ಕೋರ್ಟ್​ ಅರೆಸ್ಟ್ ವಾರೆಂಟ್ ನೀಡಿತ್ತು ಎಂದು ಆ ಪ್ರಕರಣ ಉಲ್ಲೇಖಿಸಿ, ಆರೋಪಿಗಳ ವಿರುದ್ಧಸಿಐಡಿ ಪೊಲೀಸರು ಅರೆಸ್ಟ್ ವಾರೆಂಟ್ ಕೋರಿದ್ದರು. ಕಲಬುರಗಿಯ 3ನೇ JMFC ಕೋರ್ಟ್​ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಆರೂ ಜನರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ