ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹೈನುಗಾರಿಕೆ ಮಾಡುವ ರೈತರ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಮಿಶ್ರತಳಿ ಹಸು, ಎಮ್ಮೆ ಖರೀದಿಗೆ 20 ಸಾವಿರ ರೂ. ಸಬ್ಸಿಡಿ ನೀಡಲಿದೆ.
ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 20665 ರೂಪಾಯಿ ಸಹಾಯಧನ, ಸಾಮಾನ್ಯ ವರ್ಗದ ರೈತರಿಗೆ 15,500 ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಸಹಾಯಧನದ ಜೊತೆಗೆ ಸಾಲಸೌಲಭ್ಯ ನೀಡಲಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ 33%, ಸಾಮಾನ್ಯ ವರ್ಗದ ರೈತರಿಗೆ 25% ಸಹಾಯಧನ ಲಭ್ಯವಾಗಲಿದೆ. ರೈತರು ಆಯಾ ತಾಲೂಕಿನ ಪಶು ವೈದ್ಯಾಧಿಕಾರಿ ಕಚೇರಿ ಸಂಪರ್ಕಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ 8277100200ಗೆ ಕರೆ ಮಾಡಬಹುದು.