ಬರೋಬ್ಬರಿ 30 ವರ್ಷಗಳಿಂದ ಶೌಚಾಲಯದಲ್ಲಿ ಸಮೋಸಾ ಹಾಗೂ ಇತರ ಖಾದ್ಯಗಳನ್ನು ತಯಾರಿಸುತ್ತಿದ್ದ ಉಪಹಾರ ಗೃಹವನ್ನು ಪತ್ತೆ ಹಚ್ಚಿ, ಮುಚ್ಚಿಸಿರುವ ಘಟನೆ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದೆ.
ಕೇಳಿದಂತೆಯೇ ವಾಕರಿಕೆ ಬರುವಂತಹ ವಿಚಿತ್ರ ಆಹಾರ ಸಂಸ್ಕೃತಿಯನ್ನು ಅನುಸರಿಸಿಕೊಂಡಿದ್ದ ಸೌದಿ ಅರೇಬಿಯಾದ ಉಪಹಾರ ಗೃಹದ ಬಗ್ಗೆ ಅಲ್ಲಿನ ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಇದೀಗ ಬರೋಬ್ಬರಿ 3 ದಶಕಗಳ ಬಳಿಕ ಅದನ್ನು ಮುಚ್ಚಿಸಲಾಗಿದೆ.
ಉಪಹಾರ ಗೃಹದ ಟಾಯ್ಲೆಟ್‌ನಲ್ಲಿ ತಿಂಡಿ ಹಾಗೂ ಊಟವನ್ನು ತಯಾರಿಸಲಾಗುತ್ತಿದ್ದು, ಅವಧಿಯನ್ನು ಮೀರಿರುವ ಆಹಾರ ಪದಾರ್ಥಗಳನ್ನೂ ಬಳಕೆ ಮಾಡಿರುವುದಾಗಿ ಅಧಿಕಾರಿಗಳು ಕಡುಹಿಡಿದಿದ್ದಾರೆ. ಇದೀಗ ಅಸಹ್ಯಕರವಾಗಿ ಖಾದ್ಯವನ್ನು ತಯಾರಿಸುತ್ತಿದ್ದ ರೆಸ್ಟೊರೆಂಟ್ ಅನ್ನು ಅಧಿಕಾರಿಗಳು ಮುಚ್ಚಿದ್ದಾರೆ.