ಬೆಂಗಳೂರು: ಆರೋಪಿ ದಿವ್ಯಾ ಹಾಗರಗಿ ಡಿ.ಕೆ ಶಿವಕುಮಾರ್ ಜೊತೆ ಮಾತನಾಡುತ್ತಿರುವ ಫೋಟೋ ವೈರಲ್ ಆಗುವುದ್ದಕ್ಕೆ ನನಗೂ ನೋಟಿಸ್ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ನನಗೂ ನೋಟೀಸ್ ಕೊಡಲಿ, ನನ್ನನ್ನು ವಿಚಾರಣೆಗೆ ಕರೆಯಲಿ ನನಗೂ ಈಗ ಆ ಫೋಟೋ ಬಗ್ಗೆ ಹೇಳಿದ್ರು. ನೂರಾರು ಜನ ಬಂದು ನನ್ನ ಭೇಟಿ ಮಾಡ್ತಾರೆ. ನಾನು ಮಂತ್ರಿಯಾಗಿದ್ದವನು. ಮಂತ್ರಿ ಆಗಿದ್ದಾಗ ದಿವ್ಯಾ ಹಾಗರಗಿ ಯಾವುದೋ ಡೆಲಿಗೇಶನ್ ಕರೆ ತಂದಿದ್ದರು ಮಾತನಾಡಿ ಹೋಗಿದ್ದರು ಎಂದರು.
ಬಿಜೆಪಿಯವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಮತನಾಡುತ್ತಾ ಇರಬೇಕು.ನನ್ನ ಹೆಸರು ಬರಬೇಕಲ್ಲ. ಓಡಾಡ್ತಿರುತ್ತೆ ಓಡುವಷ್ಟು ದಿನ ಓಡಲಿ ಎಂದಿದ್ದಾರೆ ಎಂದು ಹೇಳಿದರು.