ಜಾನುವಾರುಗಳಿಗೆ ಮೇವು ತರುವಾಗ ಸಿಡಿಲು ಬಡಿದು ಓರ್ವ ಮಹಿಳೆ, ಎರಡು ಎಮ್ಮೆಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.ಬೆಂಗಳೂರು; ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ(Electric Wire)ತುಳಿದು ಯುವಕ ಸಾವನ್ನಪ್ಪಿರುವಂತಹ ದುರ್ಘಟನೆ ಬೆಂಗಳೂರಿನ ಸಂಜಯ್ ನಗರದಲ್ಲಿ ನಡೆದಿದೆ.
ಕಿಶೋರ್ (27) ಮೃತ ಯುವಕ. ಬೆಸ್ಕಾಂ ನಿರ್ಲಕ್ಷ್ಯ ಎಂದು ಆರೋಪಿಸಿ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಓರ್ವ ಮಹಿಳೆ, ಎರಡು ಎಮ್ಮೆಗಳ ಸಾವು;
ಬೆಳಗಾವಿ: ಜಾನುವಾರುಗಳಿಗೆ ಮೇವು ತರುವಾಗ ಸಿಡಿಲು ಬಡಿದು ಓರ್ವ ಮಹಿಳೆ, ಎರಡು ಎಮ್ಮೆಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಮ್ಮ ವಟವಟಿ(38) ಮೃತ ಮಹಿಳೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.