ಚಿಕ್ಕಬಳ್ಳಾಪುರ: ಬಡವರು, ದಿನ ಕೂಲಿ, ನಾಲಿ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಕಷ್ಟಕ್ಕೆ ಬೇಕಾಗುತ್ತೆ ಎಂದು ಪೋಸ್ಟ್ ಆಫೀಸ್‍ಗೆ 100-200 ರೂ.ಗಳನ್ನು ಠೇವಣಿ ಕಟ್ಟುತ್ತಿದ್ರು. ಆದ್ರೆ ಜನರ ಬಳಿ ದುಡ್ಡು ಪಡೀತಿದ್ದ ಪೋಸ್ಟ್‌ಮ್ಯಾನ್ ಪೋಸ್ಟ್ ಆಫೀಸ್‍ಗೆ ದುಡ್ಡು ಕಟ್ಟದೆ ತಾನೇ ಸ್ವಂತಕ್ಕೆ ಬಳಸಿಕೊಂಡು ಚೆನ್ನಾಗಿ ಮಜಾ ಮಾಡಿದ್ದಾನೆ. ಈ ವಿಷಯ ತಿಳಿದ ಜನರು ತಮ್ಮ ಹಣ ವಾಪಸ್ ನೀಡುವಂತೆ ಧರಣಿ ಕುಳಿತಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಅಂಚೆಕಚೇರಿಯಲ್ಲಿ ಈ ಘಟನೆ ನಡೆದಿದೆ. ಕಷ್ಟಕಾಲಕ್ಕೆ ಆಗಲಿ ಎಂದು ಅಂಚೆ ಕಚೇರಿಯಲ್ಲಿ ಪ್ರತಿದಿನ ತಾವು ದುಡಿದ ಹಣದಲ್ಲಿ ಬಡಮಧ್ಯಮ ವರ್ಗದ ಜನ ಒಂದಿಷ್ಟು ಅಂತ ಉಳಿತಾಯ ಮಾಡಿ ಠೇವಣಿ ಮಾಡ್ತಿದ್ರು. ಅದು ನೇರವಾಗಿ ಪೋಸ್ಟ್‌ಮ್ಯಾನ್ ಕೈಗೆ ದುಡ್ಡು ಕೊಡುತ್ತಿದ್ರು. ಹೀಗೆ ಪೋಸ್ಟ್ ಮ್ಯಾನ್‍ಗೆ ಹಣ ಕಟ್ಟಿದ್ದ ಜನ ಕಷ್ಟ ಇದೆ ಅಂತ ಪೋಸ್ಟ್ ಅಫೀಸ್‍ಗೆ ಹೋಗಿ ಹಣ ಡ್ರಾ ಮಾಡುವುದಕ್ಕೆ ಹೋದ್ರೆ ಅವರಿಗೆ ಶಾಕ್ ಆಗಿದೆ.
ದಿನ ಹಣ ಕಟ್ಟುತ್ತಿದ್ರೂ ಅವರ ಖಾತೆಗಳಲ್ಲಿ ಹಣವೇ ಇರಲಿಲ್ಲ. ಅರೇ ಇದೇನಪ್ಪಾ ಅಂತ ಪೋಸ್ಟ್‌ಮ್ಯಾನ್ ಕರೆಸಿ ವಿಚಾರಣೆ ಮಾಡಿದಾಗ ಆಸಲಿ ಸತ್ಯ ತಿಳಿದುಬಂದಿದೆ. ಬಡವರ ಬಳಿ ದುಡ್ಡು ಪಡೀತಿದ್ದ ಪೋಸ್ಟ್‌ಮ್ಯಾನ್ ಇವರಿಗೆ ನಕಲಿ ಸೀಲ್ ಸಹಿ ಮಾಡಿದ ರಸೀದಿ ನೀಡಿದ್ದಾನೆ. ಈ ಹಣವನ್ನ ಪೋಸ್ಟ್ ಆಫೀಸ್‍ಗೆ ಕಟ್ಟಿಲ್ಲ. ಇದ್ರಿಂದ ಹಣ ಕಳೆದುಕೊಂಡ ಜನ ಈಗ ಅಂಚೆ ಕಚೇರಿಗೆ ಬಂದು ತಮ್ಮ ಹಣ ಕೊಡುವಂತೆ ಧರಣಿ ಕೂತಿದ್ದಾರೆ.