Breaking News

FDA ನೇಮಕಾತಿಯಲ್ಲೂ ಅಕ್ರಮ- ಒಂದೇ ತಾಲೂಕಿನ 202 ಮಂದಿ ಆಯ್ಕೆ

Spread the love

ಕಲಬುರಗಿ: ಪಿಎಸ್‍ಐ(PSI), ಪಿಡಬ್ಲೂಡಿ(PWD) ಪರೀಕ್ಷೆ ಅಕ್ರಮ ಮಾದರಿಯಲ್ಲೇ ಎಫ್‍ಡಿಎ ಪರೀಕ್ಷೆಯಲ್ಲಿ ಸಹ ಅಕ್ರಮದ ವಾಸನೆ ಕೇಳಿಬರುತ್ತಿದೆ. ಎಫ್‍ಡಿಎ ಪರೀಕ್ಷೆಯಲ್ಲಿ ಅಫಜಲಪುರ ತಾಲೂಕಿನ 202 ಜನ ಆಯ್ಕೆಯಾಗಿರುವುದರಿಂದಲೇ ಇದೀಗ ಅಕ್ರಮ ವಿಚಾರ ಬಯಲಾಗಿದೆ.

2021 ರಲ್ಲಿ ನಡೆದ ಎಫ್‍ಡಿಎ ಪರೀಕ್ಷೆ ನಡೆದಿತ್ತು. ಇದರಲ್ಲಿ ಪಿಎಸ್‍ಐ/ಪಿಡಬ್ಲ್ಯೂಡಿ ಪರೀಕ್ಷೆಯಂತೇ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮ ಎಸಗಲಾಗಿತ್ತು. ಒಂದೇ ತಾಲೂಕಿನ 202 ಜನ ಆಯ್ಕೆಯಾಗೋದು ಎಂಟನೇ ಅದ್ಭುತವೇ. ಆಯ್ಕೆಯಾದ 202 ಜನರಲ್ಲಿ 11ಜನ ಸ್ಟೇಟ್ ಟಾಪರ್ಸ್ ಕೂಡ ಆಗಿರುವುದು ಅನುಮಾನಕ್ಕೀಡು ಮಾಡಿದೆ.

ಇತ್ತ ಪಿಎಸ್‍ಐ ನೇಮಕಾತಿಯ `ಕಾಲ್’ ಜಾಡು ಹಿಡಿದು ಸಿಐಡಿ ಹೊರಟಿದೆ. ಬ್ಲೂಟೂತ್ ಅಕ್ರಮವನ್ನು ಪತ್ತೆ ಹಚ್ಚಲು ಟೆಕ್ನಾಲಜಿ ಮೊರೆ ಹೋಗಿದೆ. 545 ಅಭ್ಯರ್ಥಿಗಳ ಮೊಬೈಲ್ ಕರೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಪರೀಕ್ಷೆ ವೇಳೆ ಅಭ್ಯರ್ಥಿಗಳ ಮೊಬೈಲ್ ಸ್ವಿಚ್‍ಆಫ್ ಆಗಿರಬೇಕು. ಒಂದು ವೇಳೆ ಆನ್ ಆಗಿದ್ದರೂ, ಯಾವುದೇ ಕರೆ ಸ್ವೀಕರಿಸಲು ಸಾಧ್ಯವಿಲ್ಲ. ಬ್ಲೂಟೂತ್ ಬಳಸಿದ್ದರೆ ಅಭ್ಯರ್ಥಿಗಳು ಲಾಕ್ ಖಚಿತ. ಎರಡೂ ಸಿಮ್‍ಗಳಿದ್ದರೇ ಆ ಕರೆಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತದೆ.


Spread the love

About Laxminews 24x7

Check Also

ಏರ್​ಗನ್​ನಿಂದ ಹಾರಿದ ಗುಂಡು: ಶಿರಸಿಯಲ್ಲಿ 9 ವರ್ಷದ ಬಾಲಕ ಸಾವು

Spread the love ಶಿರಸಿ(ಉತ್ತರಕನ್ನಡ): ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕನ ಕೈಯ್ಯಿಂದ ಏರ್​ಗನ್​ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ