ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ವಿಚಾರವಾಗಿ ಸರ್ಕಾರ ಕತ್ತೆ ಕಾಯ್ತಿದೆಯಾ? ಕಡ್ಲೆಪುರಿ ತಿನ್ನುತ್ತಿದೆಯಾ? ಕೋಲಾಟ ಆಡುತ್ತಿದೆಯಾ? ನನ್ನ ಬಳಿ ಇನ್ಯಾವ ಸಾಕ್ಷಿ ಕೇಳುತ್ತಿದ್ದೀರಾ? ಆಡಿಯೋ ರಿಲೀಸ್ ಆಗಿ ಮೂರು ದಿನವಾದರೂ ಆರೋಪಿ ವಿರುದ್ಧ ಯಾಕೆ ಎಫ್‍ಐಆರ್ ದಾಖಲಿಸುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಂಜೆ ನನ್ನ ಮನೆಗೆ ಸಿಐಡಿಯವರು ಒಂದು ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ ಸುದ್ದಿಗೋಷ್ಠಿ ನಡೆಸಿ ಪಿಎಸ್‍ಐ ಅಕ್ರಮದ ಸಾಕ್ಷ್ಯ ಇದೆ ಎಂದಿದ್ದೀರಾ. ಆದ್ದರಿಂದ ತಮ್ಮ ಬಳಿ ಇರುವ ಸಾಕ್ಷಿ ಹಾಗೂ ದಾಖಲೆಗಳನ್ನು ಒದಗಿಸುವಂತೆ 11-30ಕ್ಕೆ ಬರುವಂತೆ ನೋಟಿಸ್ ನೀಡಿದ್ದಾರೆ. ಆದರೆ ನಾನು ಇನ್ವೆಸ್ಟಿಗೇಷನ್ ಜರ್ನಲಿಸಮ್ ಮಾಡಿದ್ದೇನೆ, ನನ್ನ ಬಳಿ ದಾಖಲೆ ಇದೆ ಅಂತ ಎಲ್ಲೂ ಹೇಳಿಲ್ಲ. ನನ್ನ 2 ಪತ್ರಿಕಾಗೋಷ್ಠಿಯನ್ನು ಕಣ್ಣು ಹಾಗೂ ಕಿವಿ ತೆರದು ನೋಡಿ ಎಂದು ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಂಜೆ ನನ್ನ ಮನೆಗೆ ಸಿಐಡಿಯವರು ಒಂದು ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ ಸುದ್ದಿಗೋಷ್ಠಿ ನಡೆಸಿ ಪಿಎಸ್‍ಐ ಅಕ್ರಮದ ಸಾಕ್ಷ್ಯ ಇದೆ ಎಂದಿದ್ದೀರಾ. ಆದ್ದರಿಂದ ತಮ್ಮ ಬಳಿ ಇರುವ ಸಾಕ್ಷಿ ಹಾಗೂ ದಾಖಲೆಗಳನ್ನು ಒದಗಿಸುವಂತೆ 11-30ಕ್ಕೆ ಬರುವಂತೆ ನೋಟಿಸ್ ನೀಡಿದ್ದಾರೆ. ಆದರೆ ನಾನು ಇನ್ವೆಸ್ಟಿಗೇಷನ್ ಜರ್ನಲಿಸಮ್ ಮಾಡಿದ್ದೇನೆ, ನನ್ನ ಬಳಿ ದಾಖಲೆ ಇದೆ ಅಂತ ಎಲ್ಲೂ ಹೇಳಿಲ್ಲ. ನನ್ನ 2 ಪತ್ರಿಕಾಗೋಷ್ಠಿಯನ್ನು ಕಣ್ಣು ಹಾಗೂ ಕಿವಿ ತೆರದು ನೋಡಿ ಎಂದು ಕಿಡಿಕಾರಿದ್ದಾರೆ.ಈ ನೋಟೀಸ್‍ನಿಂದ ಸರ್ಕಾರದ ಕಾರ್ಯವೈಖರಿ ಹೇಗಿದೆ ಎಂಬುವುದು ಗೊತ್ತಾಗುತ್ತಿದೆ. ನಾನು ನೀಡಿದ ಮಾಹಿತಿ ಅವರ ಬಳಿ ಇಲ್ಲ ಅಂತ ಹೇಳುತ್ತಿರುವುದು ಆಶ್ಚರ್ಯಕರವಾದ ಸಂಗತಿ. ಕೆಲವು ತಿಂಗಳ ಹಿಂದೆ ಅಭ್ಯರ್ಥಿಗಳು ಸಿಎಂ ಹಾಗೂ ಡಿಜಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಜನವರಿ 22 ರಂದು ಹೋಮ್ ಮಿನಿಸ್ಟರ್, ಸೆಲೆಕ್ಟ್ ಆಗದೇ ಇರುವವರು ಹೀಗೆ ಆರೋಪ ಮಾಡಿದ್ದಾರೆ ಅಂತ ಹೇಳಿದ್ದಾರೆ.
ನೇಮಕಾತಿ ತಡೆ ಹಿಡಿದ ಬಗ್ಗೆ ನಿಮಗೆ ತಿಳಿದಿಲ್ವಾ. ಪ್ರಭು ಚೌಹಾಣ್ ಅವರು ಅವ್ಯವಹಾರ ಆಗಿರುವ ಬಗ್ಗೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ.