Breaking News

ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…!

Spread the love

ಮುಂಬೈ: ಒಂದು ಊರಿದೆ. ಆ ಊರಿನ ಮನೆಗಳಿಗೆ ಬಾಗಿಲೂ ಇಲ್ಲ, ಬೀಗವೂ ಹಾಕುವುದಿಲ್ಲ. ಹೌದು ಬರೋಬ್ಬರಿ 4000 ಮಂದಿ ವಾಸಿಸುತ್ತಿರುವ ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿ ಇದುವರೆಗೇ ಯಾವ ಮನೆಗೂ ಬಾಗಿಲೂ ಇಲ್ಲ, ಬೀಗವೂ ಇಲ್ಲ ಎಂದರೆ ಆಶ್ಚರ್ಯವಾದರೂ ಸತ್ಯ.

ʼಸಬ್ ಭಗವಾನ್ ಭರೋಸೆ’ ಎಂಬ ಮಾತನ್ನು ಈ ಗ್ರಾಮದ ಜನರು ಅಕ್ಷರಶಃ ಅನುಸರಿಸುತ್ತಿದ್ದಾರೆ.

ಏಕೆಂದರೆ ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿನ ಮಂದಿ ಹಿಂದೂ ದೇವತೆಯಾದ ಶನಿ (ಶನಿ ಗ್ರಹದ ಅಧಿಪತಿ) ಯಲ್ಲಿ ಅಪಾರ ಮತ್ತು ಅಚಲ ನಂಬಿಕೆ ಇಟ್ಟಿದ್ದಾರೆ. ಗ್ರಾಮಸ್ಥರ ಪ್ರಕಾರ, ಶನಿದೇವನು ಅವರ ರಕ್ಷಕ ಮತ್ತು ದುಷ್ಟ ಜನರಿಂದ ರಕ್ಷಿಸುತ್ತಾನೆ. ಈ ಗ್ರಾಮದಲ್ಲಿ ಯಾರೇ ಕಳ್ಳತನ ಮಾಡಲು ಪ್ರಯತ್ನಿಸಿದರೂ ಅವರಿಗೆ ಮಾರಣಾಂತಿಕ ಕಾಯಿಲೆ, ಕುರುಡುತನ ಮತ್ತು ಮಾನಸಿಕ ಅಸ್ವಸ್ಥತೆಯಿಂದಾಗಿ ತಕ್ಷಣ ಶಿಕ್ಷೆಯಾಗುತ್ತದೆ ಎಂದು ಜನರು ನಂಬುತ್ತಾರೆ.

ಅಲ್ಲದೇ ಒಬ್ಬ ವ್ಯಕ್ತಿಯು ಅಪ್ರಾಮಾಣಿಕನಾಗಿದ್ದರೆ ಮತ್ತು ಏನಾದರೂ ತಪ್ಪು ಮಾಡಿದರೆ, ಅವನು/ಅವಳು ಅಪಘಾತ ಅಥವಾ ದಿವಾಳಿತನದ ರೂಪದಲ್ಲಿ ಏಳೂವರೆ ವರ್ಷಗಳ ಕಾಲ ಕಷ್ಟದ ದಿನಗಳನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ.


Spread the love

About Laxminews 24x7

Check Also

ಕಾಲುಜಾರಿ ನಾಲೆಗೆ ಬಿದ್ದ ಬಾಲಕಿ, ರಕ್ಷಣೆಗೆ ಹೋದ ನಾಲ್ವರು ಸೇರಿ ಐವರು ಮಕ್ಕಳು ನೀರುಪಾಲು

Spread the loveಮಂಡ್ಯ: ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ಬಾಲಕಿಯ ರಕ್ಷಣೆಗೆ ಮುಂದಾಗಿ, ಐವರು ಮಕ್ಕಳು ನೀರುಪಾಲಾದ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ